ಮಾನ್ಯರೇ,
ಕಳೆದ ವರ್ಷದ ಕೊರೊನಾ ಮಹಾಮಾರಿ ಬೆಂಬಿಡದ ಭೂತವಾಗಿ ಫೆಬ್ರವರಿಯಲ್ಲಿ ಆರಂಭವಾ ದಾಗ ಲಸಿಕೆಯನ್ನು ಪಡೆಯಲು ಹಿಂದು..ಮುಂದು ಮಾಡಿದವರು ಈಗ ಲಸಿಕೆಯನ್ನು ಪಡೆಯಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಉದ್ವಿಗ್ನತೆ ಸಾಮಾನ್ಯ ಜನರಲ್ಲಿ ಹೆಚ್ಚಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸರತಿಯಲ್ಲಿ ನಿಲ್ಲುವ ಬದಲು ರೂ. 250/- ನೀಡಿ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಯನ್ನು ಹಾಕಿಸಿಕೊಂಡವರು… ಈಗ 2ನೇ ಡೋಸ್ ಲಸಿಕೆ (ಖಾಸಗಿಯಲ್ಲೂ ಅಭಾವ) ಅವರೂ ಸಹ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಲಸಿಕೆ ಪಡೆಯಲು ಸರತಿಯಲ್ಲಿ ನಿಲ್ಲುವಂತಾಗಿದೆ.
ಕೊರೊನಾ ಮಹಾಮಾರಿಗೆಂದು ಕಂಡುಬರುವ ನಮ್ಮ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸನ್ನು ಪಡೆದು 45/50 ದಿನಗಳಾದರೂ ಎರಡನೇ ಡೋಸಿಗೆ ಪರದಾಡುವಂತಾಗಿದೆ.
ಲಸಿಕೆ ಪಡೆಯಯುವವರು ನಿಗದಿತ ಸಮಯದಲ್ಲಿ 2ನೇ ಡೋಸ್ ಪಡೆಯಬೇಕು… ಅಂದರೆ ಎರಡನೆಯ ಡೋಸ್ ಲಸಿಕೆಯನ್ನು ನೀಡುವ ವೇಳಾಪಟ್ಟಿ ಕೋವ್ಯಾಕ್ಸಿನ್ 28 ರಿಂದ 42 ದಿನಗಳ ಅಂತರ…, ಕೋವಿಶೀಲ್ಡ್ 42 ರಿಂದ 56 ದಿನಗಳ ಅಂತರದಲ್ಲಿ ಪಡೆಯಬೇಕೆಂದು ತಿಳಿದಿದ್ದವರಿಗೆ…. ಈಗ ಆಸ್ಪತ್ರೆ ಯಿಂದ ಆಸ್ಪತ್ರೆಗೆ ಅಲೆದಾಡುವ ಉದ್ವಿಗ್ನತೆ ಹೆಚ್ಚಾಗಿದೆ.
ಕೋವಿಶೀಲ್ಡ್ ಲಸಿಕೆ ಸರಬರಾಜಾಗುತ್ತಿದ್ದರೂ ಅವಶ್ಯಕತೆ ಇದ್ದವರಿಗೆ ಇನ್ನೂ ಸಿಗುತ್ತಿಲ್ಲ… ಹಾಗೆಯೇ ಕೋವ್ಯಾಕ್ಸಿನ್ ಲಸಿಕೆ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವುದರಿಂದ…. ಈ ಹಿಂದೆಯೇ ಮೊದಲ ಲಸಿಕೆ ಪಡೆದವರೆಲ್ಲರೂ ಸರ್ಕಾರಿ ಆಸ್ಪತ್ರೆಗಳಿಗೆ, ಕೇಂದ್ರಗಳಿಗೆ ದೌಡಾಯಿಸುತ್ತಿದ್ದಾರೆ.
ನಿನ್ನೆ ವಾಹಿನಿ (ಟಿವಿ 9 ಕನ್ನಡ) ಒಂದರಲ್ಲಿ ಜನಸಾಮಾನ್ಯರನ್ನು ಉದ್ವಿಗ್ನತೆಯಿಂದ ಹೊರತರಲು…
ಡಾ.ಪವನ್ ಕುಮಾರ್, ಪ್ರೊಫೆಸರ್ ಇನ್ ಮೆಡಿಸಿನ್, ಡಾ.ಚಂದ್ರಶೇಖರ್, ರೋಗ ನಿರೋಧಕ ತಜ್ಞ ಹಾಗೂ ಡಾ.ವಿಶಾಲ್‌ರಾವ್, ಹೆಡ್ ಅಂಡ್ ನೆಕ್ ಅಂಕಾಲಜಿಸ್ಟ್ ಅವರು ತಿಳಿಸಿರುವಂತೆ ಈ ಹಿಂದೆ ಮೊದಲನೇ ಡೋಸ್ ಪಡೆದು 2ನೇ ಡೋಸ್ ಪಡೆಯಲು 4 ವಾರದ ಸಮಯ ನಿಗದಿ ಮಾಡಲಾಗಿದ್ದು ಈಗ 2ನೇ ಡೋಸ್ ಪಡೆಯಲು 8 ರಿಂದ 12 ವಾರದ ಸಮಯ ನಿಗದಿ ಯಾಗಿರುವುದರಿಂದ ವ್ಯಾಕ್ಸಿನೇಷನ್ ಟೆನ್ಷನ್‌ನಿಂದ ಹೊರಬಂದು ಧೈರ್ಯದಿಂದ ಇದ್ದು, ಸರಿಯಾಗಿ ಮಾ ಸ್ಕ್ ಹಾಕುವುದು. ಸಾಮಾಜಿಕ ಅಂತರವನ್ನು ಕಾಪಾಡುವ ಹಾಗೂ ಸ್ವಚ್ಛತೆಗೆ ಆದ್ಯತೆ, ಅವಶ್ಯಕತೆ ಬಗ್ಗೆ ತಿಳುವಳಿಕೆ ನೀಡಿದ್ದರಿಂದ.. ನಾನು ಕೋವ್ಯಾಕ್ಸಿನ್ ಪಡೆದು ಇಂದಿಗೆ 43 ದಿನಗಳಾಗಿದ್ದರಿಂದ ಆತಂಕದಲ್ಲಿದ್ದೆ. ಮೇಲಿನ ವೈದ್ಯರು ಹೇಳಿಕೆಯಿಂದ ಈಗ ಸ್ವಲ್ಪ ನಿರಾಳ.
ನಾಳೆ ಸೋಮವಾರ ಲಾಕ್‌ಡೌನ್ ಇರುವುದರಿಂದ 2ನೇ ಲಸಿಕೆ ಪಡೆಯಲು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ನಮ್ಮ ದ್ವಿಚಕ್ರ ವಾಹನದಲ್ಲಿ ಹೋಗಲು ಜಿಲ್ಲಾಧಿಕಾರಿ ಅನುಮತಿಯನ್ನು ನೀಡಲಿ ಎಂದು ಪ್ರಾರ್ಥಿಸುವೆ.
– ರಘುನಾಥರಾವ್ ತಾಪ್ಸೆ, ನಿವೃತ್ತ ಬ್ಯಾಂಕ್ ಅಧಿಕಾರಿ, ದಾವಣಗೆರೆ.