ಆತ್ಮವಿಶ್ವಾಸವೊಂದಿದ್ದರೆ ಎಂತಹ ಕಾಯಿಲೆಯನ್ನಾದರೂ ಗೆಲ್ಲಬಹುದು

ಮಾನ್ಯರೇ,

ಆರೋಗ್ಯ ಸಂಪತ್ತೊಂದಿದ್ದರೆ ಉಳಿದೆಲ್ಲ ಸಂಪತ್ತನ್ನೂ ಪಡೆಯ ಬಹುದು.  ದೇಶದಲ್ಲಿ ಹಬ್ಬುತ್ತಿರುವ ಮಹಾ ಮಾರಿ ಕೊರೊನಾ 2ನೇ ಅಲೆ  ಜನರಲ್ಲಿ ಆತಂಕ ಮತ್ತು ಭಯ ಹುಟ್ಟಿಸಿದೆ. ಈ ಅಲೆಯು ಎಲ್ಲಿಯವರೆಗೆ ಇರುವುದೋ ಗೊತ್ತಿಲ್ಲ. ಕೋವಿಡ್ ಸೋಂಕಿತರು ಮತ್ತು ಅವರ ಬಂಧುಗಳು ಬೆಡ್ ಸಿಕ್ತಿಲ್ಲ, ಆಕ್ಸಿಜನ್ ಖಾಲಿಯಾಗಿದೆ ಎಂದು ನರಳಾಡುವುದನ್ನು ಪ್ರತಿ ನಿತ್ಯ ಕೇಳುತ್ತಿದ್ದೇವೆ. ಅನೇಕರು ಕೋವಿಡ್ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವರು, ಆಂಬ್ಯುಲೆನ್ಸ್ ಸಿಗದೆ ರಸ್ತೆಯಲ್ಲೇ ನರಳಿ ಸಾಯುವವರನ್ನು ನೋಡುತ್ತಿದ್ದೇವೆ. 

ಕೊರೊನಾಗೆ  ಹೆದರಬೇಡಿ.  ಇದನ್ನು ತಡೆಗಟ್ಟಿ ಜಯಿಸುವುದು  ನಮ್ಮ ಕೈಯಲ್ಲಿದೆ. ನಮ್ಮ  ದೇಹದಲ್ಲಿ ಸಾಕಷ್ಟು ರೋಗ ನಿರೋಧಕ ಶಕ್ತಿ ಇದೆ ಎಂದು ಬೇಜವಾಬ್ದಾರಿ ತೋರಿದರೆ, ನಿಮ್ಮನ್ನೂ ಆವರಿಸದೆ ಬಿಡದು. ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವ ಅವಶ್ಯಕತೆ ಇದೆ.

‘ಆತ್ಮ ವಿಶ್ವಾಸ ಎಲ್ಲಾ ಜಯದ ಮೂಲ’  ಏನನ್ನೇ ಕಳೆದು ಕೊಂಡರೂ ಆತ್ಮವಿಶ್ವಾಸವನ್ನು ಮಾತ್ರ ಯಾವ ಕಾರಣಕ್ಕೂ, ಯಾವ ಸಂದರ್ಭದಲ್ಲೂ ಕಳೆದು ಕೊಳ್ಳಬಾರದು. ಪೆಂಗ್ ಶುಯಿಲಿನ್, ಬೆಂಜಮಿನ್ ಫ್ರಾಂಕ್ಲಿನ್, ನಿಕ್ ವುಜಿಸಿಕ್, ಸ್ಟೀಫನ್ ಹಾಕಿಂಗ್ ಮುಂತಾದವರ ಯಶೋಗಾಥೆಗಳು ನಮ್ಮ ಬದುಕಿಗೆ  ಪ್ರೇರಣೆಯಾಗುತ್ತವೆ. ಕೋವಿಡ್ ನಿಯಂತ್ರಣಕ್ಕೆ ಕೇವಲ ಸರ್ಕಾರ ಮಾತ್ರ ಪ್ರಯತ್ನ ಪಟ್ಟರೆ ಸಾಲದು ನಮ್ಮೆಲ್ಲರ ಪಾತ್ರ ಮುಖ್ಯವಾಗಿದೆ. ನಾವು ಮನೆಯಲ್ಲಿಯೇ ಇದ್ದರೆ ಅದೇ ದೊಡ್ಡ ಕೊಡುಗೆಯಾಗುತ್ತದೆ. 


– ಹೆಚ್. ಮಲ್ಲಿಕಾರ್ಜುನ್‌, ಉಪನ್ಯಾಸಕರು, ಹರಪನಹಳ್ಳಿ.

error: Content is protected !!