ಶಿಥಿಲಾವಸ್ಥೆ ತಲುಪಿದ ವಾಹನವನ್ನು ಪುನಶ್ಚೇತನಗೊಳಿಸಿ

ಶಿಥಿಲಾವಸ್ಥೆ ತಲುಪಿದ ವಾಹನವನ್ನು ಪುನಶ್ಚೇತನಗೊಳಿಸಿ - Janathavaniಮಾನ್ಯರೇ,

ಪ್ರಸ್ತುತ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹಲವಾರು ಜನರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶವ ಸಾಗಾಟ ಮಾಡಲು ಸಂಬಂಧಿಕರು ಅಲೆದಾಡುವ ಸ್ಥಿತಿ ಉಂಟಾಗಿದೆ. ಅದರಿಂದ ಮಾನ್ಯ ಜಿಲ್ಲಾಡಳಿತ ಈ ಹಿಂದೆ ನಮ್ಮ ಮನವಿಗೆ ಸ್ಪಂದಿಸಿ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್‍ ಅವರು ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾಯುವ ಕಡುಬಡವರ ಶವಗಳನ್ನು ಸಾಗಾಟ ಮಾಡಲು ಶ್ರದ್ಧಾಂಜಲಿ ಹೆಸರಿನಲ್ಲಿ ವಾಹನಗಳನ್ನು ನೀಡಿದ್ದರು. ಆದರೆ, ಪ್ರಸ್ತುತ ಶ್ರದ್ಧಾಂಜಲಿ ವಾಹನವು ಜಿಲ್ಲಾ ಆಸ್ಪತ್ರೆಯಲ್ಲಿ ಶವಾಗಾರದ ಮುಂದೆ ಶಿಥಿಲಾವಸ್ಥೆ ತಲುಪಿದ್ದು, ಅದನ್ನು ಪುನಶ್ಚೇತನಗೊಳಿಸಿ ಪ್ರಸ್ತುತ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಲು ಈ ಮೂಲಕ ಒತ್ತಾಯಿಸುತ್ತಿದ್ದೇನೆ.


– ಪಿ.ಬಿ. ಅಂಜು ಕುಮಾರ್, ಸಾಮಾಜಿಕ ಕಾರ್ಯಕರ್ತರು, ದಾವಣಗೆರೆ.

error: Content is protected !!