ಮಾನ್ಯರೇ,
ಸರ್ಕಾರ ಕೋವಿಡ್-19 ಕುರಿತು ನಿಯಮಾ ವಳಿಗಳನ್ನು ಬಿಡುಗಡೆ ಮಾಡಿರುವುದು ಸರಿಯಷ್ಟೆ, ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್‍ಗೆ ಅವಕಾಶ ನೀಡಲಾಗಿದೆ, ಇದರನ್ವಯ ಸ್ವಿಗ್ಗಿ ಮತ್ತು ಝೊಮೊಟೋ ಮುಖಾಂತರ ಆಹಾರ ಪದಾರ್ಥಗಳನ್ನು ನಮ್ಮಿಷ್ಟದ ಹೋಟೆಲ್‍ಗಳಿಂದ ನಮ್ಮ ನಮ್ಮ ಮನೆಗಳಿಗೆ, ಕಚೇರಿಗಳಿಗೆ ತರಿಸಿಕೊಳ್ಳು ವುದಕ್ಕೆ ನಿಯಮಾವಳಿಗಳಲ್ಲಿ ಅವಕಾಶವಿದೆ, ಈ ಆಹಾರ ಸರಬರಾಜು ಮಾಡುವ ಸಿಬ್ಬಂದಿ ವರ್ಗ ದವರು ಧರಿಸಿರುವ ಬಟ್ಟೆಗಳನ್ನು ಹಾಗೂ ಸಾಮಾ ಜಿಕ ಅಂತರ ಕಾಪಾಡಿಕೊಳ್ಳದೆ ಗುಂಪು ಗುಂಪಾಗಿ ಪ್ರತಿಷ್ಠಿತ ಹೋಟೆಲ್ ಹಾಗೂ ರೆಸ್ಟೋರೆಂಟ್ ಮುಂದೆ ಜಮಾಯಿಸಿರುವ ಇವರೂ ಕೂಡ ಕೋವಿಡ್ ಹರಡಲು ಪರೋಕ್ಷವಾಗಿ ಕಾರಣ ಆಗುತ್ತಿದ್ದಾರೆ ಎಂಬುದು ಉತ್ಪ್ರೇಕ್ಷೆಯ ಮಾತಲ್ಲ, ಬೇಕಿದ್ದರೆ ಎಂ.ಸಿ.ಸಿ ಕಾಲೋನಿ, ಆಂಜನೇಯ ಬಡಾವಣೆ. ಮತ್ತಿತರೆ ಕಡೆ ಬಂದು ಸಂಬಂಧಿಸಿದ ಅಧಿಕಾರಿ ವರ್ಗದವರು ಪರಿಶೀಲಿಸಿ, ದಂಡ ವಿಧಿಸಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ.
– ಎಂ. ಕೆ. ಬಕ್ಕಪ್ಪ, ದಾವಣಗೆರೆ.