ಮಾನ್ಯರೇ,
ಏಪ್ರಿಲ್ 9 ರಂದು ತಮ್ಮ ಪತ್ರಿಕೆಯ ಓದುಗರ ಪತ್ರ ವಿಭಾಗಕ್ಕೆ ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಆಯ್ಕೆ ಸಾಧ್ಯವೇ! ಎಂದು ಪತ್ರವನ್ನು ಬರೆದಿದ್ದೆ. ಪತ್ರ ಓದಿದ ಮಿತ್ರರು ನನಗೆ ಫೋನಾಯಿಸಿ… ಹೌದಲ್ಲಾ! ಯಾವ ಲಸಿಕೆಯನ್ನು ನಮಗೆ ಹಾಕಿದ್ರೂ ಎಂಬುದು ಮೊಬೈಲಲ್ಲಿ ಇದೆಯೇ ಹೊರತು ನಮಗೆ ಮಾಹಿತಿ ಇಲ್ಲ. ಹಾಗೆ ಕೆಲವರು ಮೊಬೈಲ್‌ಗೆ ಬಂದ ಮಾಹಿತಿ ಹೇಗೆ ಡೌನ್‌ಲೋಡ್ ಮಾಡಿಕೊಳ್ಳಬೇಕೆೆಂದು ತಿಳಿಸಿದಾಗ ಅವರು ಖುಷಿ ಪಟ್ಟರು. ಏಪ್ರಿಲ್ 11 ರಿಂದ 14 ರ ವರೆಗೆ ವ್ಯಾಕ್ಸಿನ್ ಉತ್ಸವವೂ ಆಯ್ತು. ಈಗ ಎಲ್ಲೆಲ್ಲೂ ಎರಡನೇ ಮಹಾಮಾರಿಯ ಆರ್ಭಟಕ್ಕೆ ಬೆದರಿದ ಸರ್ಕಾರ 14 ದಿನಗಳ ಲಾಕ್ ಡೌನ್ ಘೋಷಿಸಿದ್ದೂ ಆಯ್ತು… ಜನಸಾಮಾನ್ಯರು ಮೊದಲ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಲು… ಆಸ್ಪತ್ರೆಗಳಲ್ಲಿ ಜನ ಜಾತ್ರೆಗೆ ಸೇರಿದಂತೆ ಸೇರಿದ್ದಾರೆ. ಹೀಗಾಗಿ ಎಲ್ಲೆಡೆ…. ಲಸಿಕೆ ಖಾಲಿ ಖಾಲಿ… No Stock Board. ಆದರೆ, ಕೊವ್ಯಾಕ್ಸಿನ್ ಮೊದಲ ಡೋಸ್ ಹಾಕಿಸಿಕೊಂಡು 28 ದಿನಗಳಿಂದ 42 ದಿನಗಳಲ್ಲಿ ಹಾಗೂ ಕೋವಿಶೀಲ್ಡ್ ಲಸಿಕೆ 42 ದಿನಗಳಿಂದ 56 ದಿನಗಳಲ್ಲಿ (2-3 ದಿನ ವ್ಯತ್ಯಾಸವಾದರೆ ಸಮಸ್ಯೆ ಆಗದು) ಕಡ್ಡಾಯವಾಗಿ ಹಾಕಿಸಿಕೊಂಡರೆ ಮಾತ್ರ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳ್ತಾರೆ.
ನಾನು ಕೊವ್ಯಾಕ್ಸಿನ್ ಲಸಿಕೆ ಹಾಕಿಸಿದ್ದರಿಂದ ಅದು ಸರ್ಕಾರಿ ಆಸ್ಪತ್ರೆಗ ಳಿಗೆ ಮಾತ್ರ ಸರಬರಾಜು… ಖಾಸಗಿ ಆಸ್ಪತ್ರೆಯಲ್ಲಿ ಕೇಳಿದರೆ ನಮ್ಮಲ್ಲಿ ಕೋವಿಶೀಲ್ಡ್ ಮಾತ್ರ.. ಸದ್ಯಕ್ಕೆ ಬರಬೇಕು ಮೇ 2ರ ನಂತರ ಬರಬಹುದು.
ಪ್ರತಿದಿನ ಸಿ.ಜಿ. ಜಿಲ್ಲಾ ಆಸ್ಪತ್ರೆಗೆ ಕೊವ್ಯಾಕ್ಸಿನ್ 2ನೆ ಡೋಸ್ ಪಡೆಯಲೆಂದು ನೂರಾರು ಹಿರಿಯ ನಾಗರಿಕರು ಬರಬೇಕೆಂದರೆ…..ಕೊರೊನಾ 2ರ ಅಲೆಯ ಭಯ….
ಈಗ ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದು 45-50 ದಿನಗಳಾಗಿ ಎರಡನೆಯ ಡೋಸ್ ಲಭ್ಯವಾಗದೆ ಇದ್ದಲ್ಲಿ ಮೊದಲು ಹಾಕಿದ್ದು ವ್ಯರ್ಥವಾದಂತೆ….ಪುನಃ ಮೊದಲ ಲಸಿಕೆ…ನಂತರ 2ನೇ ಲಸಿಕಾ ಪಡೆಯ ಬೇಕಾಗಬಹುದೇ..? ಎಲ್ಲದಕ್ಕೂ ಪ್ರಶ್ನಾರ್ಥಕ ಚಿಹ್ನೆ ? ಈ ದಿಶೆಯಲ್ಲಿ ಆರೋಗ್ಯ ಇಲಾಖೆಯವರು ಸಿ.ಜಿ. ಜಿಲ್ಲಾ ಆಸ್ಪತ್ರೆಯಲ್ಲಿ ಎರಡನೆಯ ಡೋಸ್ ತರಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸಹಕರಿಸಲಿ ಎಂದು ಪ್ರಾರ್ಥಿಸುವೆ..
– ರಘುನಾಥರಾವ್ ತಾಪ್ಸೆ, ನಿವೃತ್ತ ಬ್ಯಾಂಕ್ ಅಧಿಕಾರಿ