ರೈಲ್ವೆ ಫಲಕ ಸರಿಪಡಿಸಿ

ಮಾನ್ಯರೇ,

ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಹೊರ ಬರುವ ಮಾರ್ಗದಲ್ಲಿ ಕನ್ನಡದಲ್ಲಿ §ನಿರ್ಗಮಿಸಿ¬ ಹಾಗೂ ಹಿಂದಿಯಲ್ಲಿ §ಬಾಹರ್ ಜಾಯೆ¬ ಎಂಬ ಸೂಚನಾ ಫಲಕ ಅಳವಡಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ?

ಯಾತ್ರಿಗಳಿಗೆ ಹೊರ ಹೋಗುವ ದಾರಿಯನ್ನು ತೋರಿಸುವಂತಿರಬೇಕೇ ಹೊರತು ಸೂಚನೆ ನೀಡುವಂತೆ ಫಲಕ ಹಾಕುವುದು ಸರಿಯಲ್ಲ. ಕನ್ನಡದಲ್ಲಿ §ನಿರ್ಗಮನ¬ ಎಂದು ಹಾಗೂ ಹಿಂದಿಯಲ್ಲಿ§ಬಾಹರ್ ಜಾನೆ ಕಾ ರಾಸ್ತಾ¬ ಎಂದು ಸೂಚಿಸಿದರೆ ಸೂಕ್ತವಾಗುತ್ತದೆ. ಇದನ್ನು ಬಿಟ್ಟು, ಯಾತ್ರಿಗಳು ಹೊರ ಹೋಗಿ ಎಂದು ಹೇಳುವಂತೆ §ನಿರ್ಗಮಿಸಿ¬ ಇಲ್ಲವೇ §ಬಾಹರ್ ಜಾಯೆ¬ ಎಂದು ಹೇಳುವುದು ರೈಲ್ವೆಗೆ ಸೌಜನ್ಯ ತರುವುದಿಲ್ಲ. ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ಕೋರಿಕೆ.


– ಪೋಪಟ್‌ಲಾಲ್ ಜೈನ್, ದಾವಣಗೆರೆ.

error: Content is protected !!