ಮಾನ್ಯರೇ,
ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಹೊಂಡದ ಸರ್ಕಲ್‍ನಲ್ಲಿ ನಗರ ದೇವತೆ ದುರ್ಗಾಂಬಿಕಾ ಸಮುದಾಯ ಭವನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ನವರು ಅತಿಥಿಗಳು ಮಾತನಾಡಲು ವ್ಯವಸ್ಥಿತ ವೇದಿಕೆ ನಿರ್ಮಿಸಿದ್ದರೂ ಸಹ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಮಾತನಾಡದೆ ತರಾತುರಿಯಲ್ಲಿ ನಿರ್ಗಮಿಸಿದ್ದು ನೋಡಿದರೆ, ಬೇರೆಯವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಾವು ಬಂದು ಉದ್ಘಾಟನೆ ಮಾಡಿದಾಗ ಆಗುವ ಮುಜುಗರ ತಪ್ಪಿಸಿಕೊಳ್ಳಲು ಈ ರೀತಿ ಮಾಡಿರಬಹುದೇ ? ಎನಿಸದೇ ಇರದು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದಾಗ ಇದರ ಬಗ್ಗೆ ಚರ್ಚೆಯಾಗ ಬಹುದು ಎಂಬ ಯೋಚನೆಯಿಂದ ಪಲಾಯನ ಮಾಡಿದರೋ ಅಥವಾ ಇದಕ್ಕಿಂತಲೂ ಮುಖ್ಯವಾದ ಕೆಲಸ ವಿತ್ತೇ ಎಂದು ಅವರೇ ಉತ್ತರಿಸಬೇಕು.
ಆದರೆ, ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜಿಸಿದ್ದ ಸ್ಮಾರ್ಟ್ ಸಿಟಿ ಹಣ ಪೋಲಾಗಿದ್ದು ಸತ್ಯ.
– ಕೆ.ಎಲ್.ಹರೀಶ್ ಬಸಾಪುರ, ದಾವಣಗೆರೆ