ಮಾನ್ಯರೇ,
ದಾವಣಗೆರೆ ಜೆ.ಹೆಚ್. ಪಟೇಲ್ ಬಡಾವಣೆಯು ಸಾಕಷ್ಟು ಅಭಿವೃದ್ಧಿಯಾಗಿದ್ದು, ಇನ್ನೂ ಅನೇಕ ಮನೆಗಳು ನಿರ್ಮಾಣ ಹಂತದಲ್ಲಿವೆ, ಜನಸಂದಣಿಯಿಂದ ಕೂಡಿದೆ. ಆದರೆ, ಬಡಾವಣೆ ವಾಸಿಗಳು ಓಡಾಡಲು ಸಿಟಿ ಬಸ್ ಸೌಲಭ್ಯವಿಲ್ಲದೇ ಜನರಿಗೆ ಅನಾನುಕೂಲವಾಗಿದೆ. ಇದೇ ಬಡಾವಣೆಯಲ್ಲಿ ಬಾಲಕರ ಹಾಗೂ ಬಾಲಕಿಯರ ಹಾಸ್ಟೆಲ್‌ಗಳು ಇವೆ. ಈ ಹಿಂದೆ ಜೆ.ಹೆಚ್. ಪಟೇಲ್ ಬಡಾವಣೆಯ ವಾಟರ್ ಟ್ಯಾಂಕ್ ವೃತ್ತದವರೆಗೆ ಓಡಾಡುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕೋವಿಡ್ ಕಾರಣದಿಂದ ಬಂದ್ ಆಗಿದ್ದು, ಇದುವರೆಗೆ ಬಸ್ ಸಂಚಾರ ಆರಂಭವಾಗಿಲ್ಲ.
ದಯವಿಟ್ಟು ಜೆ.ಹೆಚ್. ಪಟೇಲ್ ವಾಟರ್ ಟ್ಯಾಂಕ್ ವೃತ್ತದಿಂದ ಹೊಸದಾಗಿ ನಿರ್ಮಾಣವಾಗಿರುವ (ಡಿಸಿ ಮನೆ ಎದುರಿನ ರಸ್ತೆ) ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ (ಬಿಸ್ಸೆನ್ನೆಲ್ ಹತ್ತಿರ) ಶಾಮನೂರಿ ನವರೆಗೆ ಬರುವ ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಲಿ ಎಂಬುದು ನಮ್ಮ ಆಶಯ.
ಇಂತಿ ನೊಂದ ವಿದ್ಯಾರ್ಥಿ ಪೋಷಕರು
ಕೆ. ನಂದಕುಮಾರ್, ಜೆ.ಹೆಚ್. ಬಡಾವಣೆ.