ಪರೀಕ್ಷೆ ಇಲ್ದೇ ಪಾಸಂತೆ

ಮಾನ್ಯರೇ, 

ರೀ.. ಯಾಕ್ರೀ ನಡುಗ್ತಾ ಇದೀರಾ?! ಬೆವರ್ತಿದೀರಿ ಬೇರೆ! ಏನಾಯ್ತು ಈ ಪಾಟಿ ಗಾಬರಿಯಾಗೋಕೆ?
ಪರೀಕ್ಷೆ ಇಲ್ದೆ ಪಾಸ್ ಅಂತೆ ಕಣೇ!
ಅಲ್ಲಾ… ಶಾಲೆ ಮಕ್ಳು ಖುಷಿ ಪಡೋ ವಿಚಾರ, ನಿಮಗ್ಯಾಕೆ ಗಾಬರಿ?
ಅಲ್ವೇ … ಕೊರೊನಾ… ಪರೀಕ್ಷೆ ಇಲ್ದೇ ಪಾಸಂತೆ ಕಣೇ!
ರೀ …. ಮತ್ತದೇ ಹೇಳ್ತೀರಲ್ಲಾ… ಪರೀಕ್ಷೆ ಇಲ್ದೇ ಪಾಸಾದ್ರೂ ಮಾಡ್ಲಿ, ಫೇಲಾದ್ರೂ ಮಾಡ್ಲಿ, ಅದೆಲ್ಲಾ ಶಾಲಾ ಮಕ್ಳ ವಿಚಾರ, ನಿಮಗ್ಯಾಕೆ ಗಾಬರಿ?!
ಛೇ… ಛೇ… ಅದಲ್ವೇ… ಸುದ್ದಿ ಕೇಳಲಿಲ್ವಾ…. ಭೂಗತ ಕೊರೊನಾ ಅಂತೆ !!
ಶೀತ, ಕೆಮ್ಮು, ನೆಗಡಿ, ಕಫ, ಜ್ವರ ಯಾವ ಲಕ್ಷಣಾನೂ ಇರಲ್ವಂತೆ!
ಆರಾಮಾಗೇ ಇರ್ತಾರಂತೆ. ಹಾಗಾಗಿ ಯಾವುದೇ ವೈದ್ಯಕೀಯ ಪರೀಕ್ಷೆನೂ ಇಲ್ವಂತೆ, ಆದ್ರೆ ಕೊರೊನಾ ಒಳಗೇ ಇರುತ್ತಂತೆ ! ಸೀದಾ ಮೇಲಿನ ಲೋಕಕ್ಕೆ ಪಾಸ್ ಮಾಡುತ್ತಂತೆ !!!

-ಹೆಚ್.ಬಿ. ಮಂಜುನಾಥ್

error: Content is protected !!