ಧೂಳು ಮುಕ್ತ, ಸಮೃದ್ಧ ನಗರವನ್ನಾಗಿಸೋಣ

ಮಾನ್ಯರೇ,

ತರಗೆಲೆ ಸುಟ್ಟು ನಮ್ಮೆಲ್ಲರ ಆರೋಗ್ಯ ಕೆಡಿಸಿಕೊಳ್ಳದಿರೋಣ. ಒಣ ಕಸದ ರಾಶಿಗೆ ಬೆಂಕಿ ಕಡ್ಡಿ ಗೀರುವ ಚಾಳಿ ಪ್ರತಿ ವಸಂತ ಋತುವಿನಲ್ಲೂ ವರ್ಷ ವರ್ಷಕ್ಕೆ ಹೆಚ್ಚುತ್ತಿದೆ. ಸಾರಿ ಸಾರಿ ಪ್ರತೀ ಸಾರಿ ಹೇಳಿದರೂ ಕಸ ಹೊಡೆಯುವವರು ಎಲೆ ಸುಡುವುದು ಬಿಡುವುದಿಲ್ಲ. ಅದು ಅವರ ತಪ್ಪಲ್ಲ. ಎಲೆ ಸ್ವಚ್ಛ ಮಾಡದಿದ್ದರೆ ಮನೆಯವರಿಂದ, ಅಧಿಕಾರಿಗಳಿಂದ ದೂಷಣೆ. ಅದಕ್ಕೆ ವಾಯುಮಾಲಿನ್ಯದ ಅಪಾಯಕಾರಿ ಮತ್ತು ದುಷ್ಪರಿಣಾಮವಾದ ಎಲೆ ಸುಡುವ ಕಾರ್ಯಕ್ಕೆ ಕೈ ಹಚ್ಚುತ್ತಾರೆ. ಜೊತೆಗೆ ಪ್ಲಾಸ್ಟಿಕ್‌ನ್ನು ಸಹ ಸುಡುತ್ತಾರೆ. ಇದರಲ್ಲಿರುವ ಕ್ರಯೋಜನ್ ಎಂಬ ವಿಷಾನಿಲ ಉತ್ಪತ್ತಿಯಾಗಿ ಆರೋಗ್ಯಕ್ಕೆ ಅಪಾರ ಹಾನಿ ಉಂಟುಮಾಡುತ್ತದೆ. 

ಇದರಲ್ಲಿ ನಮ್ಮೆಲ್ಲರ ನಾಗರಿಕ ಪ್ರಜ್ಞೆ, ಜಿಲ್ಲಾಡಳಿತದ ಪರಿಸರ ಮಾಲಿನ್ಯ ಸರಿ ಪಡಿಸುವ ತುರ್ತು ಅನಿವಾರ್ಯ,

ಅಗತ್ಯ, ಉಳಿವು-ಅಳಿವಿನ ಕರ್ತವ್ಯಗಳಾಗಿವೆ. ಸಮುದಾಯದ ಆರೋಗ್ಯಕ್ಕೆ ಹೆಚ್ಚು ಹಣ ಖರ್ಚು ಮಾಡುವ ನಾವು ಇಂತಹ ಸಣ್ಣ ವಿಷಯಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಏಕೆ? ಆದ್ದರಿಂದ ದಯವಿಟ್ಟು ನಗರ ಸಭಾ ಸದಸ್ಯರು, ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ರಸ್ತೆಯ ಮೇಲೆ, ಮನೆಯ ಮುಂದೆ ಅಧಿಕವಾಗಿ ಬೀಳುವ ಎಲೆಗಳನ್ನು ಸಂಗ್ರಹಿಸಿ ಉದ್ಯಾನವನಗಳಲ್ಲಿ ಉತ್ತಮ ಸಾವಯವ ಗೊಬ್ಬರ ತಯಾರಿಸಿ, ಅದನ್ನು ಆ ಉದ್ಯಾನವನದ ಗಿಡಗಳಿಗೆ ಬಳಸುವಂತೆ ಮಾಡ ಬೇಕು. ಈಗಾಗಲೇ ಕೆಲವೊಂದು ಕಡೆಗಳಲ್ಲಿ ಎಲೆ ಗೊಬ್ಬರವನ್ನು ತಯಾರಿಸುವ ಕಾರ್ಯ ನಡೆಯುತ್ತಿದೆ. ಉದಾ: ಎಂ.ಸಿ.ಸಿ.’ಬಿ’ ಬ್ಲಾಕ್‌ನಲ್ಲಿ

ಕೌನ್ಸಿಲರ್ ಗಡಿಗುಡಾಳ್ ಮoಜುನಾಥ್‌ ಗೊಬ್ಬರ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಉಳಿದ 42 ವಾರ್ಡ್‌ಗಳಲ್ಲಿ ಈ ಕಾರ್ಯ ನಡೆಯಬೇಕೆಂಬುದು ನಮ್ಮ ವಿನಂತಿ.

ಬನ್ನಿ ದವನಗಿರಿಯನ್ನು ಹಸಿರುಯುಕ್ತ, ಧೂಳು ಮುಕ್ತ ಆರೋಗ್ಯ ಸಮೃದ್ಧಿವುಳ್ಳ

ನಗರವನ್ನಾಗಿಸೋಣ. ಇದು ಖಂಡಿತ ನಮ್ಮ ನಿಮ್ಮೆಲ್ಲರಿಂದ ಸಾಧ್ಯ. ವಂದನೆಗಳೊಂದಿಗೆ.


– ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವ ಕಲ್ಯಾಣ ಟ್ರಸ್ಟ್ (ರಿ)

error: Content is protected !!