ಕುಂಡಲಗಳಿಂದ ಕಿರಿಕಿರಿ…

ಮಾನ್ಯರೇ,

ದಾವಣಗೆರೆ ಪಿ.ಬಿ. ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಡಿಸಿ ಕಛೇರಿಯ ಕಡೆಗೆ ಹೋಗುವ ರಸ್ತೆ ಹಾಗೂ ಡಿಸಿ ಕಛೇರಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬರುವ ಕಡೆ ಪಿಬಿ ರಸ್ತೆಯ ಎರಡೂ ಭಾಗಗಳಲ್ಲಿ ಕುಂಡಲಗಳನ್ನು ಇಡಲಾಗಿದೆ. ಕುಂಡಲಗಳು ಇರುವ ಕಾರಣ ವಾಹನಗಳನ್ನು ನಿಲ್ಲಿಸಲು ತೊಂದರೆಯಾಗಿದೆ.  ಅನೇಕ ವಾಹನಗಳು ಸಂಚಾರ ನಿಯಮ ಪಾಲನೆ ಮಾಡದೇ ಅಡ್ಡಾ ದಿಡ್ಡಿ ವಾಹನಗಳನ್ನು  ನಿಲ್ಲಿಸುತ್ತಾರೆ. ತ್ವರಿತವಾಗಿ ಈ ಕುಂಡಲಗಳನ್ನು ತೆರವು ಮಾಡಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಆಗ್ರಹಿಸಲಾಗಿದೆ. 


– ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್

error: Content is protected !!