ಧಾರ್ಮಿಕ ಕೇಂದ್ರ, ಜ್ಞಾನಾರ್ಜನೆಯ ಮಗ್ಗುಲಲ್ಲಿ ಅಸ್ವಚ್ಚತೆ

ಮಾನ್ಯರೇ, 

ಧಾರ್ಮಿಕ ಕೇಂದ್ರವೊಂದರ ಪ್ರದೇಶದ ಮಗ್ಗುಲಲ್ಲಿ ಕೆಲವರಿಂದ ಅನಾಗರಿಕತೆ ಮತ್ತು ಅಸ್ವಚ್ಚತೆ ಮೈದಾಳಿದೆ. 

ಹೌದು, ದಾವಣಗೆರೆಯ ಎಕ್ಸ್ ಮುನಿಸಿ ಪಲ್ ಕಾಲೇಜಿನ ಎದುರಿನಲ್ಲಿರುವ ಕ್ರೈಸ್ತ ಸಮುದಾಯದ ಚರ್ಚ್ ಹೊರಾಂಗಣದಲ್ಲಿ ಒಂದು ಭಾಗದ ಕಾಂಪೌಂಡ್ ಬಳಿಯೇ ಕೆಲವರು ಸಾರ್ವಜನಿಕವಾಗಿ ಯಾವುದೇ ಮುಜುಗರವಿಲ್ಲದೇ ಮೂತ್ರ ವಿಸರ್ಜಿಸುವುದು ಅನಾಗರಿಕತೆಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲಿ ಹಗಲೊತ್ತಿನಲ್ಲೂ ಇಂತಹ ಮುಜುಗರದ ಸನ್ನಿವೇಶ ಕಾಣಸಿಗುತ್ತದೆ. 

ಕನಿಷ್ಟ ಪಕ್ಷ ಇಂತಹ ಮುಜುಗರದ ಸನ್ನಿವೇಶ ತಮ್ಮ ಮಾನಕ್ಕೆ ಹಾನಿ ಎಂಬ ಪರಿವೇ ಇಲ್ಲದಿರುವುದು ಸೋಜಿಗವೇ ಸರಿ ಎನ್ನುತ್ತಾರೆ ನಾಗರಿಕ ಲಕ್ಷಣವುಳ್ಳವರು.

ಸಮೀಪವೇ ಸುಲಭ ಶೌಚಾಲಯವಿದ್ದರೂ ಅದರತ್ತ ತೆರಳದೇ ಕಾಂಪೌಂಡ್ ಬಳಿಯೇ ಮೂತ್ರ ವಿಸರ್ಜಿಸುವುದು ದಿನವೂ ಆಗುತ್ತಿದ್ದು, ಇದರಿಂದ ಅಲ್ಲಿ ದುರ್ವಾಸನೆ ಬೀರುವುದಲ್ಲದೇ ಮಾರಕ ಕೀಟಗಳ ಉತ್ಪತ್ತಿಗೆ ಕಾರಣವಾಗಿದೆ. ಅಲ್ಲಿ ಎದುರಿಗೇ ವಾಣಿಜ್ಯ ಮಳಿಗೆಗಳಿದ್ದು, ವ್ಯಾಪಾರಸ್ಥರು ಇದನ್ನು ಕಂಡೂ ಕಾಣದಂತಾಗಿದ್ದು, ಅನಾಗರಿಕತೆ ನಡವಳಿಕೆಗೆ ತಿಳುವಳಿಕೆ ಮೂಡಿಸಿದರೂ ಕಿವಿಗೊಡದ ಬಗ್ಗೆ ರೋಸಿ ಹೋಗಿದ್ದಾರೆ. 

ಇನ್ನೂ ಅಲ್ಲಿ ಕಟ್ಟಡದ ಅವಶೇಷಗಳು, ಕೆಲ ತ್ಯಾಜ್ಯ ಕಾಣಸಿಗಲಿದ್ದು, ಚರ್ಚ್ ಸಮೀಪದ ರಸ್ತೆಯಲ್ಲಿ ಚರಂಡಿ ನೀರು ಹರಿದು ನಿಲ್ಲುವುದು,‌ ಕಸದ ರಾಶಿಯೇ ಅಸ್ವಚ್ಚತೆಯನ್ನು ಬೆರಳು ಮಾಡಿ ತೋರಿಸುವಂತಿದೆ. ಅಲ್ಲೂ ದುರ್ವಾಸನೆ ಬೀರುವ ಜೊತೆಗೆ ಮಾರಕ ಕೀಟಗಳ ಉತ್ಪತ್ತಿ, ಮಾರಕ ಕಾಯಿಲೆಗಳ ಸೃಷ್ಟಿಗೆ ಎಡೆಮಾಡಿಕೊಡುತ್ತಿದೆ ಎಂಬ ಆತಂಕವನ್ನೂ ಸೃಷ್ಠಿಸಿದೆ.

ಕೊರೊನಾ ಮಹಾಮಾರಿ ದೇಶಕ್ಕೆ ಕಾಲಿಟ್ಟು ಸಾಕಷ್ಟು ಜನರ ಜೀವ ಬಲಿ ಪಡೆಯಿತು. ಸ್ಚಚ್ಚತೆ ಬಹು ಮುಖ್ಯ ಎಂಬುದನ್ನು ತೋರಿಸಿಕೊಟ್ಟಿತು.‌ ಹೀಗಿದ್ದರೂ ಸಹ ಯಾವುದೇ ಭಯವಿಲ್ಲದೇ ಅಸ್ವಚ್ಚತೆಗೆ ಕಾರಣೀಭೂತರಾಗುವುದು ಎಷ್ಟು ಸರಿ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯದ ಜೊತೆಗೆ ನಾಗರಿಕರಾಗಿ ಜವಾಬ್ದಾರಿ ಮರೆಯಬಾರದೆಂಬ ಅರಿವಿನ ಮಾತುಗಳು ಕೇಳಿ ಬರುತ್ತಿವೆ.


– ನೊಂದ ನಾಗರಿಕರು

error: Content is protected !!