ಮಾನ್ಯರೇ,
ನಗರದ ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳ ಕಾಮಗಾರಿ ಇಷ್ಟು ದಿನ ಆಮೆಗತಿಯಲ್ಲಿ ಸಾಗುತ್ತಿದ್ದು, ಇದೀಗ ಮುಂ ದಿನ ತಿಂಗಳು ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದ್ದಂತೆಯೇ ಕಾಮಗಾರಿಗಳ ವೇಗಕ್ಕೆ ಚುರುಕು ಬಂದಂತಾಗಿದೆ. ನಿಜಕ್ಕೂ ಸಂತೋಷದ ವಿಷಯ.
ಯಾವುದೇ ಸರ್ಕಾರವಿರಲಿ ಚುನಾವಣೆ ಸಮೀಪಿಸುತ್ತಿರುವಾಗಲೇ ಶಂಕುಸ್ಥಾಪನೆ/ಉದ್ಘಾಟನೆಗಳ ಸಂಖ್ಯೆಗಳಿಗೇನೂ ಕಮ್ಮಿ ಇರಲ್ಲ. ಆದರೆ ನಿಗದಿತ ದಿನಾಂಕಕ್ಕೆ ಉದ್ಘಾಟನೆಯಾಗುವ ಉದ್ದೇಶದಿಂದ, ಮೂರ್ನಾಲ್ಕು ತಿಂಗಳಲ್ಲಿ ಮುಗಿಯುವ ಕಾಮಗಾರಿಗಳನ್ನು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿಸಿ ಕೇವಲ ಒಂದರಿಂದ ಒಂದೂವರೆ ತಿಂಗಳಲ್ಲಿ ಆತುರಾತುರವಾಗಿ ಮುಗಿಸುವ ಬರದಲ್ಲಿ ಗುಣಮಟ್ಟದಲ್ಲಿ ರಾಜಿಯಾಗದಿದ್ದರೆ ಸಾಕು.
ಯಾಕೆಂದರೆ ನಮ್ಮ ತೆರಿಗೆ ಹಣ ಯಾವುದೇ ರೀತಿಯಲ್ಲೂ ವೃಥಾ ಪೋಲಾಗಬಾರದು. ಚುನಾವಣೆಗಳು ಹತ್ತಿರ ಬಂದರೆ ಕಳೆದ ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆಲ್ಲ ಜೀವ ಬರುತ್ತದೆ, ಯಾವುದೋ ಒಂದು ನೆಪದಲ್ಲಿ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಿದರೆ ಸಾಕು, ಅದಕ್ಕಿಂತ ಖುಷಿ ಬೇರೊಂದಿಲ್ಲ.
– ಮುರುಗೇಶ ಡಿ., ದಾವಣಗೆರೆ.