ಮಾನ್ಯರೇ,
ಸುಮಾರು 8.5 ಲಕ್ಷ ಜನಸಂಖ್ಯೆ ಇರುವ ದಾವಣಗೆರೆ ನಗರವನ್ನು ಕೇಂದ್ರ ಸರ್ಕಾರವು ಸ್ಮಾರ್ಟ್ ಸಿಟಿ ಹಾಗೂ ಅಮೃತ್ ಯೋಜನೆಗೆ ಸೇರ್ಪಡೆಗೊಳಿಸಿದೆ. ಮಧ್ಯ ಕರ್ನಾಟಕದ ಕೇಂದ್ರ ಬಿಂಧುವಾಗಿರುವ ಇಲ್ಲಿ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ವಾಣಿಜ್ಯ ಕೇಂದ್ರವಾಗಿದೆ.
ನಗರದ ಮುಖ್ಯ ವೃತ್ತಗಳಲ್ಲಿ ಹಾಗೂ ರಸ್ತೆಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ಫುಟ್ ಅಂಡರ್ ಬ್ರಿಡ್ಜ್, ಫುಟ್ ಓವರ್ ಬ್ರಿಡ್ಜ್, ಸ್ಕೈ ವಾಕ್ಗಳನು ಸ್ಮಾರ್ಟ್ ಸಿಟಿ ಅನುದಾನದಲಿ ಕಲ್ಪಿಸಿದರೆ ನಾಗರಿಕರಿಗೆ ರಸ್ತೆ ದಾಟಲು ತುಂಬಾ ಅನುಕೂಲವಾಗುತ್ತದೆ. ಇದರಿಂದ ಸಣ್ಣ ಪುಟ್ಟ ಅಪಘಾತಗಳನ್ನು ತಪ್ಪಿಸಬಹುದು. ಅಲ್ಲದೆ ವಾಹನಗಳು ಸುಗಮವಾಗಿ ಸಂಚರಿಸಬಹುದು.
ನಗರದ ರೈಲು ನಿಲ್ದಾಣದ ಮುಂಭಾಗ, ಜಯದೇವ ವೃತ್ತ, ಗಾಂಧಿ ಸರ್ಕಲ್, ಅರುಣಾ ಚಿತ್ರಮಂದಿರದ ಮುಂಭಾಗ, ವಿದ್ಯಾರ್ಥಿ ಭವನ, ಗುಂಡಿ ಛತ್ರ ವೃತ್ತ, ಹಳೆ ಬಸ್ ನಿಲ್ದಾಣದ ಹತ್ತಿರ, ಶಂಕರ್ ವಿಹಾರ್ ವೃತ್ತ ಮುಂಭಾಗ , ಹೊಸ ಬಸ್ ನಿಲ್ದಾಣ ಮುಂಭಾಗ ಹೀಗೆ ಅನೇಕ ಕಡೆ ಈ ಪ್ರಯತ್ನವನ್ನು ಮಾಡಬಹುದು. ದಾವಣಗೆರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು.
–ನಮ್ಮ ದಾವಣಗೆರೆ ತಂಡ