ಖಾಸಗಿ ಬಸ್ ನಿಲ್ದಾಣ ಉದ್ಘಾಟನೆ ಯಾರ ಅನುಮತಿಗಾಗಿ ಕಾಯುತ್ತಿದೆ ?

ಖಾಸಗಿ ಬಸ್ ನಿಲ್ದಾಣ ಉದ್ಘಾಟನೆ ಯಾರ ಅನುಮತಿಗಾಗಿ ಕಾಯುತ್ತಿದೆ ?

ಮಾನ್ಯರೇ,

ಯಾರ ಅನುಮತಿಗಾಗಿ ನಗರದ ಪಿ.ಬಿ. ರಸ್ತೆ ಯಲ್ಲಿರುವ ಖಾಸಗಿ ಬಸ್ ನಿಲ್ದಾಣವು ಉದ್ಘಾಟನೆಗಾಗಿ ಕಾಯುತ್ತಿದೆ? ಈಗಾಗಲೇ ಖಾಸಗಿ ಬಸ್ ನಿಲ್ದಾಣವು ನವೀಕರಣಗೊಂಡು ತಿಂಗಳುಗಳು ಕಳೆದರೂ ಹೈಸ್ಕೂಲ್ ಮೈದಾನದ ಒಂದು ಭಾಗದಲ್ಲೇ ಖಾಸಗಿ ಬಸ್ಸುಗಳು ನಿಲ್ಲುತ್ತಿವೆ. ಹಳೆ ಕೋರ್ಟ್ ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ವಾಹನಗಳು ನಿಂತು, ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ವಾಹನಗಳಿಗೆ, ಕೋರ್ಟು ಕಚೇರಿ ಕೆಲಸಗಳಿಗೆ ಬರುವ ಸಾರ್ವಜನಿಕರಿಗೆ ಈ ಟ್ರಾಫಿಕ್‌ನಿಂದ ಪ್ರತಿದಿನ ಉಪದ್ರವ ಉಂಟಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಬೇಸರದ ಸಂಗತಿ ಆಗಿದೆ.

ದಯವಿಟ್ಟು ಈ ಕೂಡಲೇ ತಾತ್ಕಾಲಿಕ ಖಾಸಗಿ ಬಸ್ ನಿಲ್ದಾಣವನ್ನು ನವೀಕೃತಗೊಂಡಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಿ, ಸಾರ್ವಜನಿಕರಿಗೆ ಅನುಕೂಲ ವಾತಾವರಣವನ್ನು ಸೃಷ್ಠಿಸಬೇಕು.


– ವಾದಿರಾಜ ಭಟ್ ವೈ., ವಕೀಲರು, ದಾವಣಗೆರೆ.

error: Content is protected !!