ಮಾನ್ಯರೇ,
ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕರ್ನಲ್ ರವೀಂದ್ರನಾಥ ಸರ್ಕಲ್‌ನಲ್ಲಿ ಯಾವುದೋ ಲೈನ್ ಎಳೆಯಲು ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಿ ಸರಿಯಾಗಿ ರಿಪೇರಿ ಮಾಡದ ಕಾರಣ ವಾಹನ ಸವಾರರು ಜೀವ ಕೈಯಲ್ಲಿಡಿದು ಗಾಡಿ ಓಡಿಸಬೇಕಾಗಿದೆ. ಇಂತಹದೇ ರಸ್ತೆ ಕತ್ತರಿಸಿರುವ ಪ್ರಕರಣಗಳು ಸಾಮಾನ್ಯವಾಗಿ ಎಲ್ಲಾ ವೃತ್ತಗಳಲ್ಲೂ ನೋಡಬಹುದು. ಅದರಲ್ಲಿ ಪಿ.ಬಿ. ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ರಿಂಗ್ ರಸ್ತೆಯಲ್ಲಿ ಮತ್ತು ಲಕ್ಷ್ಮಿ ಫ್ಲೋರ್ ಮಿಲ್ ಬಳಿಯೂ ಕಾಣಬಹುದು. ಮಳೆ ಬಂದಾಗ ಈ ಗುಂಡಿಗಳು ಕಾಣುವುದಿಲ್ಲ. ಹಾಗಾಗಿ ಅನೇಕ ಅಪಘಾತಗಳು ಇಲ್ಲಿ ನಡೆದಿವೆ.
ವೇಗವಾಗಿ ಹೋಗುವ ವಾಹನ ಸವಾರರು ಈ ಗುಂಡಿಗಳನ್ನು ಕಂಡು ಗಕ್ಕನೆ ಬ್ರೇಕ್ ಹಾಕಿದರೆ ಹಿಂದಿನ ಸವಾರರು ಬಂದು ಗಾಡಿಗೆ ಗುದ್ದಿರುವ ಅನೇಕ ಪ್ರಕರಣಗಳು ಇಲ್ಲಿ ನಡೆಯುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಅಪಾಯಕಾರಿ ಗುಂಡಿಗಳನ್ನು ಮುಚ್ಚಿಸಬೇಕು.
-ನೊಂದ ನಾಗರಿಕರು