ಆಗಸ್ಟ್ 15 ರಂದು ಹದಡಿ ರಸ್ತೆಯಲ್ಲಿ ವಾಹನ ಮಾರ್ಗ ಬದಲಿಸಿ

ಮಾನ್ಯರೇ, 

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಯಾಗಿರುತ್ತದೆ. ಶಾಲಾ- ಕಾಲೇಜಿನ ಮಕ್ಕಳು ನಗರದ ವಿವಿಧ ಭಾಗಗಳಿಂದ ಕ್ರೀಡಾಂಗಣದ ಪೂರ್ವ ಮತ್ತು ಉತ್ತರ ಗೇಟಿನಿಂದ ಒಳ ಬರುತ್ತಾರೆ. ಹದಡಿ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು ರಸ್ತೆ ದಾಟುವ ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಕಾರ್ಯಕ್ರಮ ಪ್ರಾರಂಭವಾಗುವ ವೇಳೆಯಿಂದ ಮುಕ್ತಾಯವಾಗುವವರೆಗೆ ಹದಡಿ ರಸ್ತೆಯಲ್ಲಿ ಸಂಚರಿಸುವ ವಾಹನ ಮಾರ್ಗ ಬದಲಿಸಿದರೆ ಮಕ್ಕಳು ಅಪಾಯ ರಹಿತವಾಗಿ ಓಡಾಡಬಹುದು. ಜೊತೆಗೆ ಸುಗಮ ಸಂಚಾರ ಮತ್ತು ಜನಸಂದಣಿ ನಿಯಂತ್ರಿಸಲು ಪೊಲೀಸ್ ವ್ಯವಸ್ಥೆಯೂ ಆಗಬೇಕು.

ಸ್ಟೇಡಿಯಂ ಸೌಂಡ್ ಸಿಸ್ಟಂ ಕೊನೆಯಲ್ಲಿರುವವರಿಗೆ ತಲುಪುವುದಿಲ್ಲ. ಸ್ಟೇಡಿಯಂನಲ್ಲಿ ಕಾರ್ಯಕ್ರಮ ಕೊಡಲು ಬರುವ ಮಕ್ಕಳಿಗೆ ನಿರೂಪಕರ ಮಾತು ಕೇಳಿಸುವುದಿಲ್ಲ. ಕ್ರೀಡಾಂಗಣದ ಸುತ್ತಲೂ ಕುಳಿತ ವೀಕ್ಷಕರಿಗೆ ಧ್ವನಿ ತಲುಪುವುದಿಲ್ಲ. ಈ ನ್ಯೂನತೆ ಸರಿಪಡಿಸಿ ಧ್ವನಿವರ್ಧಕದ ಸಾಮರ್ಥ್ಯ ಹೆಚ್ಚು ಮಾಡಿ ಎಲ್ಲರಿಗೂ ಕೇಳುವಂತೆ ವ್ಯವಸ್ಥೆ ಮಾಡಲು ಸಂಬಂಧಪಟ್ಟವರಲ್ಲಿ ವಿನಂತಿಸುತ್ತೇನೆ. ಬಾಯಾರಿದ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯವಿರುವಂತೆ ನೋಡಿಕೊಳ್ಳಲು ಮನವಿ.


– ಡಿ. ಎಸ್. ಹೇಮಂತ್, ಕಾರ್ಯದರ್ಶಿ, ಸಿದ್ಧಗಂಗಾ ವಿದ್ಯಾಸಂಸ್ಥೆ.

error: Content is protected !!