ಮಾನ್ಯರೇ,
ದಾವಣಗೆರೆಯ ಪಿ.ಜೆ. ಬಡಾವಣೆಯು ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾಗಿದೆ. ನಗರದ ಹೃದಯ ಭಾಗದಲ್ಲಿ ನೆಲೆ ಆಗಿರುವ ಈ ಏರಿಯಾದ 3ನೇ ಮುಖ್ಯ ರಸ್ತೆಯಲ್ಲಿ ಹೊಂಡಗಳು ಬಿದ್ದು ರಸ್ತೆಗಳನ್ನು ಹುಡುಕಿಕೊಳ್ಳುವ ದುಸ್ಥಿತಿ ಇದೆ.
ಪ್ರತಿದಿನ ಸಾವಿರಾರು ಜನರು ಓಡಾಡುವ ರಸ್ತೆ ಆಗಿದ್ದು, ಪ್ರಮುಖವಾಗಿ ರೋಗಿಗಳು ಚಿಕಿತ್ಸೆಗಾಗಿ ಈ ಏರಿಯಾದ ಸುತ್ತಮುತ್ತಲಿನ ವೈದ್ಯರುಗಳನ್ನು ಕಾಣಲು ಬರುತ್ತಿರುತ್ತಾರೆ. ಪ್ರಮುಖ ಬಡಾವಣೆಯಲ್ಲಿ ಪಾದಚಾರಿ ಮಾರ್ಗ ಇರದೇ, ಸುಸಜ್ಜಿತ ರಸ್ತೆ ಹೊಂದದೇ ಸಾರ್ವಜನಿಕರು ನಿತ್ಯ ಸಮಸ್ಯೆಗಳನ್ನು ಕಾಣುವಂತಾಗಿದೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಉತ್ತಮ ರಸ್ತೆ, ಪಾದಚಾರಿ ಮಾರ್ಗ ಮಾಡಿಕೊಡಬೇಕಾಗಿ ವಿನಂತಿ.
– ವಾದಿರಾಜ ಭಟ್ ವೈ., ವಕೀಲರು, ದಾವಣಗೆರೆ.