ಯಾವುದು ಸರಿ ಶೀರ್ಷಿಕೆ !?

ಮಾನ್ಯರೇ,

ನಮ್ಮ  ರಾಜ್ಯದಲ್ಲಿ  ಮೊದಲು ಮುಖ್ಯ  ಕಂದಾಯ  ವಿಭಾಗಗಳಿರುವ  ಬೆಂಗಳೂರು, ಮಂಗಳೂರು, ಗುಲ್ಬರ್ಗ ಮತ್ತು ಬೆಳಗಾವಿ  ಮಹಾನಗರಗಳಲ್ಲಿ ಮಾತ್ರ ವಿಶ್ವ ವಿದ್ಯಾನಿಲಯಗಳು ಇರುತ್ತಿದ್ದವು. ಆದರೆ  ಶಿಕ್ಷಣವು   ವ್ಯಾಪಾರೀಕರಣಗೊಳ್ಳುತ್ತಿರುವ  ಇತ್ತೀಚಿನ ವರ್ಷಗಳಲ್ಲಿ  ಅವು  ನಾಯಿಕೊಡೆಗ ಳಂತೆ  ತಲೆ  ಎತ್ತುತ್ತಿರುವುದೇನೋ ಸರಿ,  ಆದರೆ  ಹಲವು  ಕಡೆ ` ವಿಶ್ವವಿದ್ಯಾನಿಲಯ’  ಹಾಗೂ  ಕೆಲವು ಕಡೆ `ವಿಶ್ವವಿದ್ಯಾಲಯ’  ಎಂದು ಹೆಸರುಗಳಿರುವುದು  ಜನ ಸಾಮಾನ್ಯರಿಗೆ  ಗೊಂದಲ  ಉಂಟುಮಾಡುತ್ತಿದೆ.  ಶಿಕ್ಷಣ  ಸಂಸ್ಥೆಗಳೇ ಹೀಗೆ  ದ್ವಂದ್ವ ನಾಮಾವಳಿಗಳ  ಫಲಕಗಳನ್ನು  ಬರೆಸಿಕೊಂಡಿರುವುದು  ಎಷ್ಟು  ಸರಿ ?

 ಅದೇ ರೀತಿ ಮಂತ್ರಾಲಯ, ಸಚಿವಾಲಯ, ಗ್ರಂಥಾಲಯ,  ದೇವಾಲಯ, ಶಿವಾಲಯ, ಹೀಗೆ ಶಬ್ದಗಳ  ಬಳ್ಳಿ ಕುಡಿಯೊಡೆ ದರೆ   ನಾವು  ಯಾವ  ಕನ್ನಡ ಪದಕೋಶದಲ್ಲಿ  ಹುಡುಕಬೇಕಿದೆ ? ಈ ಹಿಂದೆ ಜನಪ್ರಿಯ  ಮಾಜಿ  ಪ್ರಧಾನಿಯಾಗಿದ್ದ   ಅಟಲ್ ಬಿಹಾರಿ  ವಾಜಪೇಯಿ , ವಾಜಪಾಯ್  , ವಾಜಪೈ, ವಾಜಪಾಯೇ, ಎಂದೆಲ್ಲಾ ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಹೀಗೆ  ಭಾಷೆ  ಮತ್ತು ಉಚ್ಚಾರಗಳ  ಬಳಕೆ   ಸಂದರ್ಭದಲ್ಲಿ ದ್ವಂದ್ವ ಮತ್ತು ಗೊಂದಲಗಳ  ನೀತಿ ಏಕೆ ?

  ಜೆ. ಎಸ್. ಚಂದ್ರನಾಥ, ನೀಲಾನಹಳ್ಳಿ,  8296522692

error: Content is protected !!