ಕೆಸರು ಗದ್ದೆಯಾಗಿರುವ ಬೆಳ್ಳೂಡಿಯ ರಸ್ತೆ

ಕೆಸರು ಗದ್ದೆಯಾಗಿರುವ ಬೆಳ್ಳೂಡಿಯ ರಸ್ತೆ

ಮಾನ್ಯರೇ,

ಹರಿಹರ ರಾಜ್ಯ ಹೆದ್ದಾರಿಯಿಂದ ಬೆಳ್ಳೂಡಿ ಗ್ರಾಮ ಸಂಪೂರ್ಣವಾಗಿ ಕೆಸರು ಗದ್ದೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಗ್ರಾಮ ವ್ಯಾಪ್ತಿಯಲ್ಲಿ ಕಾಗಿನೆಲೆ ಶಾಖಾ ಪೀಠ, ಕಾರ್ಗಿಲ್ ಫ್ಯಾಕ್ಟರಿ, ಜ್ಯೂಸ್ ಫ್ಯಾಕ್ಟರಿ, ಅನೇಕ ಸಣ್ಣಪುಟ್ಟ ಕೈಗಾರಿಕೆಗಳಿವೆ. ಅಲ್ಲದೇ ಗ್ರಾಮದಿಂದ ನಗರಕ್ಕೆ ಸಂಪರ್ಕಿಸುವ ಸಮೀಪದ ರಸ್ತೆಯಾಗಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಕೊಂಡು ಚಲಿಸುವ ದುಸ್ಥಿತಿ ಎದುರಾಗಿದೆ. ಮಳೆಗಾಲದಲ್ಲಿ  ಈ ರಸ್ತೆ ಕೆಸರು ಗದ್ದೆಯಾಗು ವುದು ಸಾಮಾನ್ಯವಾ ಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದ ಲೋಕೋಪ ಯೋಗಿ ಇಲಾಖೆ ಅಧಿ ಕಾರಿಗಳ ಜಾಣ ಕುರುಡು ತನಕ್ಕೆ  ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ವಿರಳವಾದ ಹಿನ್ನೆಲೆ, ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಹರಸಾಹಸ ಪಟ್ಟು ರಾಜ್ಯ ಹೆದ್ದಾರಿವರೆಗೆ ಕಾಲ್ನಡಿಗೆಯಲ್ಲಿ ಸಾಗಬೇಕು. ಅವಗಢ ಹಾಗೂ ದುರಂತ ಸಂಭವಿಸುವ ಮುನ್ನ ರಸ್ತೆ ದುರಸ್ತಿಗೆ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹ.


–  ಸುನೀಲ್ ಹರಿಹರ 

ನಮ್ಮೂರಿನ ರಸ್ತೆ ನೋಡಿ ನಮಗೆ ಜಿಗುಪ್ಸೆ ಬಂದಿದೆ. ತುರ್ತಾಗಿ ನಗರದ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ತೊಂದರೆ ಆಗುತ್ತಿದೆ.

– ರಾಜಶೇಖರಯ್ಯ, ಗ್ರಾಮಸ್ಥ

ತಮ್ಮ ಕಾರ್ಯಕ್ಕೆ ತೆರಳುವ ಗ್ರಾಮಸ್ಥರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಈ ರಸ್ತೆಯಲ್ಲಿ ಸಾಗಲು ಸರ್ಕಸ್ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಕೂಡಲೇ ರಸ್ತೆ ದುರಸ್ತಿ ಕಾರ್ಯ ನಡೆಯಬೇಕು.

– ದಿವ್ಯಾ ಎಂ ಆರ್, ವಿದ್ಯಾರ್ಥಿನಿ

error: Content is protected !!