ರಸ್ತೆ ಸರಿಪಡಿಸಿ, ಗುಂಡಿ ಮುಚ್ಚಿಸಿ: ಸ್ಥಳೀಯರ, ಪ್ರಯಾಣಿಕರ ಮನವಿ

ರಸ್ತೆ ಸರಿಪಡಿಸಿ, ಗುಂಡಿ ಮುಚ್ಚಿಸಿ: ಸ್ಥಳೀಯರ, ಪ್ರಯಾಣಿಕರ ಮನವಿ

ಮಾನ್ಯರೇ, 

ನಗರದ ಪಿ.ಬಿ. ರಸ್ತೆಯ ಆರ್.ಎಚ್.ಧರ್ಮಶಾಲೆ ಸಮೀಪದ ಬಿಎಸ್‍ಎನ್‍ಎಲ್ ಕಲ್ಲಿನ ಬಿಲ್ಡಿಂಗ್ ಮುಂಭಾಗ ಇರುವ ವೃತ್ತದಲ್ಲಿ ದೊಡ್ಡ ಗುಂಡಿಯಾಗಿದ್ದು ಬಹಳ ತೊಂದರೆಯಾಗಿದೆ. ಇಲ್ಲಿ ಇರುವ ಗುಂಡಿ ಯಾರಿಗೂ ಸಹ ಕಾಣುವುದಿಲ್ಲ. ಪ್ರತಿದಿನ ಲೆಕ್ಕವಿಲ್ಲದಷ್ಟು ವಾಹನಗಳು,  ಸಾರ್ವಜನಿಕರು ಓಡಾಡುವ ಈ ಜಾಗದಲ್ಲಿ ಗುಂಡಿಯಾಗಿದ್ದು, ವಾಹನ ಸವಾರರಿಗೆ ಬಹಳ ತೊಂದರೆಯಾಗಿದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ರಸ್ತೆಯ ಗುಂಡಿಯನ್ನು ಮುಚ್ಚುವ ಮೂಲಕ ಸಾರ್ವಜನಿಕರ ಶಾಪದಿಂದ ಮುಕ್ತರಾಗಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಈ ರಸ್ತೆ ಮಾರ್ಗವಾಗಿ ಸರ್ಕಾರಿ, ಖಾಸಗಿ ಬಸ್ಸುಗಳು, ಶಾಲಾ-ಕಾಲೇಜಿಗೆ ಹೋಗುವ ಬಸ್‍ಗಳು, ಶಾಲಾ-ಕಾಲೇಜು ಮಕ್ಕಳು ಸೇರಿದಂತೆ, ಸುತ್ತಮುತ್ತಲ ಗ್ರಾಮಗಳಿಂದ ಬರುವ ಜನರೂ ಸಹ ಇದೇ ಮಾರ್ಗವಾಗಿ ತೆರಳುತ್ತಾರೆ.ಈಗ ಮಳೆಗಾಲವಾದ ಕಾರಣ ಪ್ರತಿದಿನ ಬಿಟ್ಟೂಬಿಡದೇ ಮಳೆ ಸುರಿಯುತ್ತಿದ್ದು, ಈ ಗುಂಡಿಯಲ್ಲಿ ನೀರು ನಿಂತಿರುವುದು ಯಾರಿಗೂ ಸಹ ಕಾಣುವುದಿಲ್ಲ. ಇಲ್ಲಿ ಪ್ರತಿದಿನ ಹಲವಾರು ಅಪಘಾತಗಳು ಸಂಭವಿಸುತ್ತಿವೆ.

ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಕಾರುಗಳು, ದ್ವಿಚಕ್ರ ವಾಹನ, ಆಟೋಗಳೂ ಸಹ ಇಲ್ಲಿ ಸಿಕ್ಕಿಕೊಂಡು ಚಾಲಕರು ಬಹಳ ತೊಂದರೆ ಅನುಭವಿಸಿದ್ದಾರೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಯನ್ನು ಗಮನಿಸಿ ಸೂಕ್ತ ರೀತಿಯಾಗಿ ರಸ್ತೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.


– ಸ್ಥಳೀಯ ನಾಗರಿಕರು

error: Content is protected !!