ಮಾನ್ಯರೇ,
ದಾವಣಗೆರೆ ಮಹಾನಗರ ಪಾಲಿಕೆ ದಿನದಿಂದ ದಿನಕ್ಕೆ ಹೆಚ್ಚು ಬೃಹದಾಕಾರವಾಗಿ ಬೆಳೆಯುತ್ತಲೇ ಇದೆ, ಸಮಸ್ಯೆಗಳು ಕೂಡ ಹೆಚ್ಚಾಗುತ್ತಲೇ ಇವೆ. ವಾಹನ ಸವಾರರಿಗೆ ತಲೆ ನೋವಾಗಿ ಪರಿಣಮಿಸಿರುವ ನಗರದೆಲ್ಲೆಡೆ ಬೀಡು ಬಿಟ್ಟಿರುವ ಬಿಡಾಡಿ ದನ,ನಾಯಿ, ಹಂದಿ ಇತ್ತೀಚಿಗೆ ಬೆಕ್ಕುಗಳು ಕೂಡ ನಗರದ ಎಲ್ಲೆಡೆ ರಸ್ತೆಗಳಲ್ಲಿ ಅಡ್ಡಾ- ದಿಡ್ಡಿ ಅಡ್ಡಾಡುತ್ತಾ ತೊಂದರೆ ಕೊಡುತ್ತಿವೆ.
ಈ ಎಲ್ಲಾ ಪ್ರಾಣಿಗಳನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಇದಕ್ಕೆ ಸಂಬಂಧಪಟ್ಟವರು ಕಠಿಣ ಕ್ರಮ ತೆಗೆದುಕೊಳ್ಳಬೇಕು, ಈ ಎಲ್ಲಾ ಪ್ರಾಣಿಗಳಿಗೆ ಪ್ರತ್ಯೇಕ ದೊಡ್ಡಿಗಳನ್ನು ನಿರ್ಮಿಸಿ ಒಂದೆಡೆ ಕಲೆ ಹಾಕುವಂತಹ ವ್ಯವಸ್ಥೆ ರೂಪಿಸಬೇಕು, ಅಲ್ಲದೆ ಆಯಾ ಪ್ರಾಣಿಗಳ ವಾರಸುದಾರರು ಇದ್ದರೆ ಅವರು ಇದರ ಬಗ್ಗೆ ಸ್ವಲ್ಪ ಆಲೋಚಿಸಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ನಗರದೆಲ್ಲೆಡೆ ಸುಗಮ ವಾಹನ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಕಳಕಳಿಯ ಮನವಿ.
– ಜೆಂಬಿಗಿ ಮೃತ್ಯುಂಜಯ, ದಾವಣಗೆರೆ