ಸಮ ಸಮಾಜ ನಿರ್ಮಾಣಕ್ಕೆ ಮಾದರಿಯಾದ ಶಾಸಕ ರಾಯರೆಡ್ಡಿ

ಮಾನ್ಯರೇ,

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿಯವರು ತಮ್ಮ ಶಾಸಕ ಸ್ಥಾನದ ಪ್ರತಿ ತಿಂಗಳ ವೇತನವನ್ನು ಗೃಹಲಕ್ಷ್ಮಿ ಯೋಜನೆಗೆ ಬಿಟ್ಟುಕೊಟ್ಟು ಇತರರಿಗೆ ಮಾದರಿಯಾಗಿರುವುದು ಕರುಣಾಮಯ ಹೃದಯದ ಸಂಕೇತ. ಅಲ್ಲದೆ ಈ ಹಿಂದೆಯೂ ಅವರು ಶಾಸಕ ಸ್ಥಾನದ ವೇತನವನ್ನು ಪಡೆಯದೇ ಸರ್ಕಾರದ ಇತರೆ ಯೋಜನೆಗಳಿಗೆ ಬಿಟ್ಟು ಕೊಟ್ಟಿರುವುದು ಶ್ಲ್ಯಾಘನೀಯ. ಈ ತರಹದ ಮಾನವೀಯ ಮಹತ್ವದ ನಿರ್ಣಯ ಅಪರೂಪ. ಈ ಮಹತ್ವದ ನಿರ್ಣಯವನ್ನು ಕರ್ನಾಟಕದ 224 ಶಾಸಕರೂ ಮತ್ತು ವಿಧಾನ ಪರಿಷತ್ತಿನ 75 ಎಂ.ಎಲ್.ಸಿಗಳು ತೆಗೆದುಕೊಂಡರೆ ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.  ಪ್ರಸ್ತುತ ಶಾಸಕರಲ್ಲಿ ಶೇ 98 ಶಾಸಕರು ಕೋಟ್ಯಾಧೀಶ್ವರರಾಗಿರುವುದರಿಂದ ತಮ್ಮ ವೇತನದ ಹಣವನ್ನು ಸರ್ಕಾರದ ಇಂತಹ ಸತ್ಕಾರ್ಯಗಳಿಗೆ ದಾನ ನೀಡಿದರೆ ಬಡವರ ಉಳಿವಿಗೆ ಸಹಕಾರಿಯಾಗುತ್ತದೆ.

ಹಣದ ಶ್ರೀಮಂತಿಕೆಯ ಜೊತೆಗೆ ಪರೋಪಕಾರ ಗುಣದ ಹೃದಯ ಶ್ರೀಮಂತಿಕೆಯನ್ನು ಸಹ ವ್ಯಕ್ತಪಡಿಸಿದಂತಾಗುತ್ತದೆ. ಇಂತಹ ಜನಪರ, ಜೀವಪರ, ಜನಾನುರಾಗಿ ಶಾಸಕರ ಸಂಖ್ಯೆ ಸಾವಿರ ಸಾವಿರವಾಗಲಿ. ಅಲ್ಲದೆ ಜನರ ಪ್ರೀತಿ, ಗೌರವವನ್ನು ಗಳಿಸಿ, ಉಳಿಸಿಕೊಂಡು  ಮುಂದಿನ ಚುನಾವಣೆಗಳಲ್ಲಿ ಗೆಲುವು ಪಡೆಯಲಿ. ಇಂತಹ  ಮಾದರಿ ಜನನಾಯಕರು ಕರ್ನಾಟಕ್ಕೆ ಮತ್ತು ಭಾರತಕ್ಕೆ ಅತ್ಯಗತ್ಯ.


– ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.

error: Content is protected !!