ಮಾನ್ಯರೇ,
ರಾಜ್ಯದ ವಿಧಾನಸಭಾ ಚುನಾವಣಾ ಪೂರ್ವದಲ್ಲೇ ಹೊಸ ರೇಷನ್ ಕಾರ್ಡ್ ಅರ್ಜಿ/ತಿದ್ದುಪಡಿ ಪ್ರಕ್ರಿಯೆಯನ್ನು ಅಂದಿನ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೂ ನಾಲ್ಕೈದು ತಿಂಗಳು ಕಳೆದು, ಹೊಸ ಸರ್ಕಾರ ಬಂದರೂ ಹೊಸ ರೇಷನ್ ಕಾರ್ಡ್ ಅರ್ಜಿಗೆ/ತಿದ್ದುಪಡಿ ಪ್ರಕ್ರಿಯೆ ಪ್ರಾರಂಭಿಸಿಲ್ಲ.
ಸರ್ಕಾರದ ಅನ್ನಭಾಗ್ಯ, ಗೃಹಲಕ್ಷ್ಮಿ ಯಂತಹ ಗ್ಯಾರಂಟಿ ಯೋಜನೆಗಳು ಸೇರಿದಂತೆ, ಅನೇಕ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಮತ್ತು ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ ಸೇರಿದಂತೆ ತುಂಬಾ ಅವಶ್ಯಕತೆಯಾಗಿರುವುದರಿಂದ ಅನೇಕ ಕುಟುಂಬಗಳು ಈ ಯೋಜನೆಗಳಿಂದ ಹೊರಗುಳಿದಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕೆ ಬೇಕು. ಆದ ಕಾರಣ ಸರ್ಕಾರ ಆದಷ್ಟು ಬೇಗ ಹೊಸ ರೇಷನ್ ಕಾರ್ಡ್ ಪ್ರಕ್ರಿಯೆಗೆ ಚಾಲನೆಗೊಳಿಸಬೇಕಾಗಿದೆ.
– ಮುರುಗೇಶ ಡಿ., ಹವ್ಯಾಸಿ ಬರಹಗಾರರು, ದಾವಣಗೆರೆ.