ಶಾಲಾ ವಾಹನ ಚಾಲಕರೇ ನಿಗಾ ವಹಿಸಿ…

ಮಾನ್ಯರೇ,

ಶಾಲಾ ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನ ಚಾಲಕರು ತೀವ್ರ ಎಚ್ಚರದಿಂದಿರಬೇಕಾಗುತ್ತದೆ. ವಾಹನ ಚಾಲನೆ ಮಾಡುವಾಗ ಚಾಲಕರು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ…

  •  ಮಕ್ಕಳು ಡೋರ್ ಬಳಿ ನಿಲ್ಲದಂತೆ ನಿಗಾ ವಹಿಸಿ.
  •  ಕಿಟಕಿಯ ಹೊರಗೆ ಕೈ ಮತ್ತು ತಲೆ ಹೊರ ಚಾಚದಂತೆ ಆಗೊಮ್ಮೆ – ಈಗೊಮ್ಮೆ ಸೂಚನೆ ನೀಡಿ.
  •  ಜಾಗಕ್ಕಾಗಿ ಜಗಳ ಮಾಡದೆ ಒಬ್ಬರಿಗೊಬ್ಬರು ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಲು ಆಯಾ ಸಮಯದಲ್ಲೇ ತಿಳಿ ಹೇಳಿ. ಶಾಲೆಗೆ  ಹೋಗಿ ವಾಪಸ್ ಬರುವ ತನಕವೂ ಮಕ್ಕಳ ಮನಸ್ಸು ಅರಳಿರಲಿ.
  •  ಮಕ್ಕಳು ಇರುವಾಗ ಮನರಂಜನೆಗಾಗಿ ಆಡಿಯೋ ಅಥವಾ ವೀಡಿಯೋ ಪ್ಲೇ  ಮಾಡಬೇಡಿ. ಏಕೆಂದರೆ ತಿಳಿವಳಿಕೆ ಇಲ್ಲದ ಕೆಲ ಚಿಕ್ಕ ಮಕ್ಕಳು ಕುಣಿದಾಡಲು ಶುರು ಮಾಡಿ ಬಿಡುತ್ತಾರೆ. ಕೆಲ ಮಕ್ಕಳು ತಮ್ಮಿಷ್ಟದ ಹಾಡು  ಮಾಡುವಂತೆ ಒಬ್ಬೊಬ್ಬರು ಒಂದೊಂದು ವಿಭಿನ್ನ ಹಾಡಿಗಾಗಿ ದುಂಬಾಲು ಬೀಳಬಹುದು. ಇದರಿಂದ ವಾಹನ ಚಾಲಕರ ಗಮನ ಅತ್ತಿತ್ತ ಆಗುವ ಸಂಭವ ಹೆಚ್ಚು . 
  •  ಮರೆಯದಿರಿ ಪೋಷಕರಿಗೆ ನಿಮ್ಮ ಮೇಲೆ ಅತೀವ ವಿಶ್ವಾಸವಿದೆ. 

– ಗಂಗಾಧರ ಬಿ.ಎಲ್. ನಿಟ್ಟೂರು.

error: Content is protected !!