ಮಹಾಲಕ್ಷ್ಮಿ ಬಡಾವಣೆಯಲ್ಲಿ ಹದಗೆಟ್ಟ ರಸ್ತೆ ದುರಸ್ತಿಗೆ ಮನವಿ

ಮಹಾಲಕ್ಷ್ಮಿ ಬಡಾವಣೆಯಲ್ಲಿ ಹದಗೆಟ್ಟ ರಸ್ತೆ ದುರಸ್ತಿಗೆ ಮನವಿ

ಮಾನ್ಯರೇ,

ಕುಂದುವಾಡ ರಸ್ತೆಯಲ್ಲಿರುವ ಶಿವಗಂಗಾ ಕಲ್ಯಾಣ ಮಂಟಪದಿಂದ ಮಹಾಲಕ್ಷ್ಮಿ ಲೇಔಟ್‌ ಕಡೆಗೆ ಹೋಗುವ ನಲವತ್ತು ಅಡಿಯ ಪ್ರಮುಖ ರಸ್ತೆ ಆಗಿದ್ದು, ಈ ರಸ್ತೆ ರಶ್ಮಿ ಲೇಔಟ್‌, ಅಮರನಾಥ್‌ ಲೇಔಟ್, ನಂದಿನಿ ಲೇಔಟ್, ರಮಾಕಾಂತ್‌ ಲೇಔಟ್‌, ಕಂಚಿಕೇರಿ ಮಹೇಶ್‌ ಲೇಔಟ್, ಅಡಿಕೆ ದುಗ್ಗಪ್ಪ ಲೇಔಟ್‌, ಸತ್ಯನಾರಾಯಣ ಲೇಔಟ್‌, ಸಂಗಮೇಶ ಲೇಔಟ್‌ ಹೀಗೆ ಹಲವಾರು ಲೇಔಟ್‌ಗಳಿಗೆ ಸಂಪರ್ಕ ಹೊಂದಿರುವ ಭಾರೀ ಸಂಚಾರ ಜನಸಂದಣಿ ಇರುವ ಪ್ರಮುಖ ರಸ್ತೆಯಾಗಿದ್ದು, ಈ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಹೊಂದಿದ್ದು, ಕಟ್ಟಡಗಳು ಸಹಾ ನಿರ್ಮಾಣಗೊಳ್ಳುತ್ತಿವೆ. ಇದರಿಂದ ಸರ್ಕಾರಕ್ಕೂ ಹಾಗೂ ಕಾರ್ಪೊರೇಷನ್‌ಗೂ ಸಹ ಸಾಕಷ್ಟು ಆದಾಯ ಬರುತ್ತಿದೆ. ಇಂತಹ ಪ್ರಮುಖ ರಸ್ತೆ ಸತತ ಮಳೆಯ ಕಾರಣ ಅಸ್ತವ್ಯಸ್ತಗೊಂಡು ಕೆಸರಿನ ಗುಂಡಿಗಳ ಹೊಂಡಾಗಳಾಗಿವೆ. ಸಾರ್ವಜನಿಕರಿಗೆ ಹೇಳಲಾರದ ಕಠಿಣ ತೊಂದರೆ ಆಗುತ್ತಿದೆ. ವಾಹನಗಳು, ನೂರಾರು ಶಾಲಾ ಮಕ್ಕಳು ಪಾದಚಾರಿಗಳು ಓಡಾಡಲು ಆಗದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ.

ಈ ರಸ್ತೆ ರಿಪೇರಿ ಮತ್ತು ಅಭಿವೃದ್ಧಿ ಬಗ್ಗೆ ಬಡಾವಣೆ ನಿವಾಸಿಗಳ ಸಂಘದ ವತಿಯಿಂದ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರೂ ಸಹಾ ಇತ್ತಕಡೆ ಗಮನ ಹರಿಸದಿರುವುದು ಆಶ್ಚರ್ಯವಾಗಿದೆ. ಇನ್ನಾದರೂ ಬಂದು ಈ ರಸ್ತೆಯನ್ನು ಅಧಿಕಾರಿಗಳು ತುರ್ತಾಗಿ ಬಂದು ಪರಿಶೀಲಿಸಿ ಹೊಸ ಕಾಂಕ್ರೀಟ್‌ ರಸ್ತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಈ ಪ್ರದೇಶಗಳ ನಿವಾಸಿಗಳ  ಪರವಾಗಿ ಲೇಔಟ್‌ಗಳ ಮಾಲೀಕರ ಪರವಾಗಿ ಹಾಗು ಸಾರ್ವಜನಿಕರ ಪರವಾಗಿ ಮನವಿ ಮಾಡುತ್ತಿದ್ದೇವೆ.


– ಹೆಚ್‌.ವಿ. ಮಂಜುನಾಥ ಸ್ವಾಮಿ, ಸಿವಿಲ್ ಇಂಜಿನಿಯರ್‌, ದಾವಣಗೆರೆ.

error: Content is protected !!