ಮಾನ್ಯರೇ,
ರಾಜ್ಯ ಸರ್ಕಾರ ಘೋಷಿಸಿರುವ ಐದು ಯೋಜನೆಗಳ ಪರಿಣಾಮ ದಿನದಿಂದ ದಿನಕ್ಕೆ ಮಧ್ಯಮ ವರ್ಗದವರ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಅದರಂತೆ ದಿನಸಿ ವಸ್ತುಗಳಾದ ಅಕ್ಕಿ, ಬೆಳೆಕಾಳು, ಅಡುಗೆ ಎಣ್ಣೆ, ಇತರೆ ವಸ್ತುಗಳ ಬೆಲೆ ಏರಿಕೆ ಮಾಡಿರುವುದು ಮತ್ತು ಉಚಿತ ಗೃಹ ಜ್ಯೋತಿ ಯೋಜನೆ ಹೆಸರಿನಲ್ಲಿ ಜನ ಸಾಮಾನ್ಯರು, ಕೈಗಾರಿಕ ಉದ್ಯಮಿಗಳ ಮೇಲೆ ಹೆಚ್ಚಿನ ಬೆಸ್ಕಾಂ ಬಿಲ್ಲಿನ ಹೊರೆತರುವ ಮೂಲಕ ಸಂಕಷ್ಟಕ್ಕೀಡುಮಾಡಿದ್ದಾರೆ.
ನಾರಿಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ನೀಡುತ್ತಿರುವ ರಾಜ್ಯ ಸರ್ಕಾರದ ತಪ್ಪು ತಿರ್ಮಾನದಿಂದಾಗಿ ಆಟೋ ಚಾಲಕರು, ಬಸ್ ಮಾಲೀಕರು, ಟಾಕ್ಸಿ ಮಾಲೀಕರಿಗೆ ಮತ್ತು ಮಿನಿ ಟೆಂಪೋದವರು ದುಡಿಮೆ ಇಲ್ಲದೆ ವಾಹನಗಳ ಕಂತು, ಶಾಲೆ ಮಕ್ಕಳ ಫೀ, ಮನೆ ಬಾಡಿಗೆ, ಮನೆಯನ್ನು ನಿರ್ವಹಿಸಲಾಗದೆ ಬೀದಿಗೆ ಬರುವಂತಾಗಿದೆ.
ಈ ಕೂಡಲೇ ರಾಜ್ಯ ಸರ್ಕಾರ ಪುನರ್ ಪರಿಶೀಲಿಸಿ ಒಳ್ಳೆಯ ತಿರ್ಮಾನವನ್ನು ತೆಗೆದುಕೊಳ್ಳುವ ಮೂಲಕ ಮಧ್ಯಮ ವರ್ಗದ ಜನರಿಗೆ, ಚಾಲಕರಿಗೆ, ಕೈಗಾರಿಕಾ ವಲಯಗಳಿಗೆ, ಅನುವು ಮಾಡಿಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
– ಸಂತೋಷ್ ಕುಮಾರ್, ಸುವರ್ಣ ಕರ್ನಾಟಕ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು