ಮಾನ್ಯರೇ,
ಬೆಂಗಳೂರು – ಪುಣೆ ಜಂಕ್ಷನ್ ಹಾಗು ಪುಣೆ ಜಂಕ್ಷನ್‌ನಿಂದ ದಿನವೂ ಸುಮಾರು 30ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ಹಾಗು ಪ್ಯಾಸೆಂಜರ್ ರೈಲು ಗಾಡಿಗಳು ಸಾಗುತ್ತವೆ. ಹಾಗಾಗಿ ಈ ಮಾರ್ಗದ ರೈಲು ಹಳಿಗಳ ಮೇಲೆ ಒತ್ತಡ ಜಾಸ್ತಿ ಆಗಿದೆ ಹಾಗು ಪ್ರಯಾಣಿಕರ ಸಂಖ್ಯೆ ಕೂಡ ವರ್ಷದಿಂದ ವರ್ಷ ಜಾಸ್ತಿ ಆಗುತ್ತಿದೆ.
ರೈಲು ಗಾಡಿಗಳು ಕ್ರಾಸಿಂಗ್ ಸಮಸ್ಯೆಯಿಂದ ಸರಿ ಸುಮಾರು 20 ರಿಂದ 25 ನಿಮಿಷ ತಡವಾಗಿ ಅಗಮಿಸುತ್ತಿರುವುದು ಸಾಮಾನ್ಯವಾಗಿದೆ. ಆದುದರಿಂದ ಬೆಂಗಳೂರು-ಪುಣೆ ಜಂಕ್ಷನ್ ಮಾರ್ಗದ ಬಾಕಿ ಇರುವ ಬೆಳಗಾವಿ , ಮೀರಜ್, ಸಾಂಗ್ಲಿ ರೈಲು ಮಾರ್ಗವನ್ನು ಮಾರ್ಚ್ 2024 ಒಳಗೆ ಆದ್ಯತೆ ಮೇರೆಗೆ ಆದಷ್ಟು ಬೇಗನೆ ದ್ವಿಪತ ಮಾರ್ಗ ಹಾಗು ವಿದ್ಯುದೀಕರಣ ( ಚಿಕ್ಕಬಾಣಾವರ – ಅರಸೀಕೆರೆ – ದಾವಣಗೆರೆ – ಹಾವೇರಿ – ಹುಬ್ಬಳಿ – ಬೆಳಗಾವಿ, ಮೀರಜ್ , ಸಾಂಗ್ಲಿ ಮಾರ್ಗ ) ಮಾರ್ಚ್ 2024 ರ ಒಳಗೆ ಮುಗಿಸಿ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು. ಧಾರವಾಡ-ಬೆಂಗಳೂರು ವಯಾ ದಾವಣಗೆರೆ-ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಆದಷ್ಟು ಬೇಗ ಓಡಿಸಬೇಕು.
– ರೋಹಿತ್ ಎಸ್. ಜೈನ್, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ, ದಾವಣಗೆರೆ.