ಹರಿಹರ ಬಸ್‌ಸ್ಟ್ಯಾಂಡ್‌ನ ಸುತ್ತ

ಮಾನ್ಯರೇ,

ಮಧ್ಯ ಕರ್ನಾಟಕದ ಹೆಬ್ಬಾಗಿಲು ಹರಿಹರ. ಈ ಪ್ರದೇಶಕ್ಕೆ ಐತಿಹಾಸಿಕ ಹಿನ್ನೆಲೆ ಇದೆ.  ಜೊತೆಗೆ ಮಠ-ಮಾನ್ಯಗಳ ಮಹತ್ವದ ಬೀಡಾಗಿದೆ. ಅಂತೆಯೇ ನಮ್ಮ ಹಿರಿಯರು ಒಂದು ಮಾತನ್ನು ಹೇಳುತಿದ್ದರು `ಹರಿಹರದ ಬಸ್‌ಸ್ಟ್ಯಾಂಡ್ ಎಂದರೆ ಮಧ್ಯರಾತ್ರಿಯೂ ಕೂಡಾ ಜಾತ್ರೆ, ಸಂತೆ, ಇದ್ದಂತೆ ಇರುತ್ತದೆ, ಪ್ರಯಾಣಿಕರು ನಿರಂತರವಾಗಿ, ನಿರಾಳವಾಗಿ ಪ್ರಯಾಣ ಮಾಡಬಹುದು ಎನ್ನುತ್ತಿದ್ದರು.  ಆದರೆ  ಅತಿ ಜನಭರಿತ ಪ್ರದೇಶವಾಗಿರುವ ಹರಿಹರದ ಬಸ್‌ಸ್ಟ್ಯಾಂಡ್ ನಲ್ಲಿ ಇಂದಿನ ದುಸ್ಥಿತಿ ಹೇಳತೀರದು. ಬಸ್‌ಸ್ಟ್ಯಾಂಡ್ ಸುತ್ತಮುತ್ತ ಮಲಮೂತ್ರ ವಿಸರ್ಜನೆಯಿಂದಾಗಿ  ಕೊಳಕು, ದುರ್ವಾಸನೆಯಿಂದ ನಾರುತ್ತಿದೆ. ರೋಗ ರುಜಿನಗಳ ಉಗಮ ತಾಣವಾಗಿದೆ.                 

ಬೆಳಕಿನ ವ್ಯವಸ್ಥೆ, ಸ್ವಚ್ಛತೆ, ಆಸನಗಳ ಕೊರತೆ. ಮದ್ಯವ್ಯಸನಿಗಳ ಗೂಡಾಗಿರುವ ಇಲ್ಲಿ ರಾತ್ರಿ ವೇಳೆ   ಕುರುಡು ಕಾಂಚಾಣದ ಧ್ವನಿ ರಾರಾಜಿಸುತ್ತಿರುತ್ತದೆ. ಮಹಿಳೆಯರ ಸುರಕ್ಷತೆಯಂತೂ ದೂರದ ಮಾತು.   ದಾವಣಗೆರೆ ಜಿಲ್ಲೆಯಾದರೂ, ಪಕ್ಕದ   ಹರಿಹರವು ಅನೇಕ ಹಳ್ಳಿಗಳ ಸಂಗಮ ವಾಗಿದೆ.  ಆದರೆ ಇಂದು   ಇಲ್ಲಿ ನಿರ್ಭೀತಿ ಮಾಯವಾಗಿ  ಜನರು ಭೀತಿಯಿಂದ ಬದುಕುವಂತಾಗಿದೆ. ರಾತ್ರಿ ವೇಳೆ  ಸ್ತ್ರೀಯರು ಇರಲಿ, ಪುರುಷರೇ ಭಯದಿಂದ ಓಡಾಡುವಂತಾಗಿದೆ.  ದಯವಿಟ್ಟು ಶಾಸಕರು, ಸಂಬಂಧಪಟ್ಟ ಉಸ್ತುವಾರಿಗಳು ಇತ್ತ ಗಮನ ಹರಿಸಬೇಕು.                                                                    


– ಪದ್ಮರಾಜ ಬಿ.,ಹರಿಹರ.

error: Content is protected !!