ಮಾನ್ಯರೇ,
ದಾವಣಗೆರೆ ನಗರದ 45ನೇ ವಾರ್ಡ್‌ನ ವಿಜಯನಗರದ 1ನೇ ಮೇನ್, 3ನೇ ಕ್ರಾಸ್‌ನಲ್ಲಿ ಚರಂಡಿಗೆಂದು ಗುಂಡಿ ತೆಗೆದು ಎರಡು ತಿಂಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ.
ಅರೆಬರೆ ಕಾಮಗಾರಿಯಿಂದಾಗಿ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಹೊರ ತೆಗೆಯಲು ಕಷ್ಟವಾಗುತ್ತಿದೆ. ಕಟ್ಟಡದ ಪಾಯಕ್ಕೆ ಹಾನಿಯೂ ಆಗಿದೆ.
ಇದರ ಜೊತೆಗೆ ಜಲಸಿರಿ ಯೋಜನೆಯ ನೀರಿನ ಪೈಪ್ ಹಾಗೂ ಒಳಚರಂಡಿ ಪೈಪುಗಳಿಗೂ ಹಾನಿಯಾಗಿದೆ. ಇವುಗಳನ್ನು ರಿಪೇರಿ ಮಾಡಿಸಲು ಸ್ವಂತ ಹಣ ಖರ್ಚು ಮಾಡಬೇಕಿದೆ.
ಎರಡು ತಿಂಗಳಾದರೂ ಕಾಮಗಾರಿ ಮುಗಿಸಿಲ್ಲ. ಈ ಬಗ್ಗೆ ಸಂಬಂಧಿಸಿದವರನ್ನು ಕೇಳಿದರೂ ಸ್ಪಂದಿಸುತ್ತಿಲ್ಲ. ನಗರ ಪಾಲಿಕೆಯು ತಕ್ಷಣವೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.
– ಕೆ.ಎಂ. ಶ್ರೀನಿವಾಸಮೂರ್ತಿ, ದಾವಣಗೆರೆ