ಸೇವಾ ಸಿಂಧು ಸೇವೆಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಿಗೂ ನೀಡಿ

ಮಾನ್ಯರೇ,

ರಾಜ್ಯದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ವಿದ್ಯಾವಂತ ನಿರುದ್ಯೋಗಿಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಇರುವ ಸಿಎಸ್‌ಸಿ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆದು  ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೇವೆಗಳನ್ನು ಕಳೆದ ಐದಾರು ವರ್ಷಗಳಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೀಡುತ್ತಿದ್ದಾರೆ.

ಆದರೆ ಕೆಲವು ಜಿಲ್ಲೆಗಳಲ್ಲಿ `ಗ್ರಾಮ್ ಒನ್’ ಪ್ರಾರಂಭವಾದ ಮೇಲೆ, ನಮಗೆ ನೀಡಲಾದ ಲಾಗಿನ್ ನಿಲ್ಲಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಂಶವೃಕ್ಷ, ಪಹಣಿ ಇತರೆ ಸೇವೆಗಳು ನಗರ ಪ್ರದೇಶದಲ್ಲಿ ಲಭ್ಯವಿಲ್ಲ ಎಂದು ಜನರಿಗೆ ಹೇಳಿ ಹೇಳಿ ಸಾಕಾಗಿ ಹೋಗಿದೆ.

ಪ್ರತಿ ಅರ್ಜಿಗೂ ಸಹ ಪ್ರತ್ಯೇಕ ಲಾಗಿನ್ ನೋಂದಣಿ ಮಾಡಿ ಅರ್ಜಿ ಸಲ್ಲಿಸಬೇಕು.  ಮಾನ್ಯ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು  ಇದರ ಬಗ್ಗೆ ಪರಿಶೀಲಿಸಿ ನಮಗೆ ಆಗುತ್ತಿರುವ ತೊಂದರೆಯನ್ನು  ಸರಿಪಡಿಸಿ, ಮೊದಲಿನಂತೆ ಸೇವಾಸಿಂಧುವಿನಲ್ಲಿ ನಮಗೆ ನೀಡಲಾಗಿದ್ದ ಎಲ್ಲ ಸೇವೆಗಳನ್ನು ತ್ವರಿತವಾಗಿ ನೀಡಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡುತ್ತೇನೆ.


– ಎಂ.ಜಿ.ಶ್ರೀಕಾಂತ್, ಸಾಮಾನ್ಯ ಸೇವಾ ಕೇಂದ್ರ, ದಾವಣಗೆರೆ.

error: Content is protected !!