ಪರಿಸರ ರಕ್ಷಣೆ ಆದ್ಯ ಕರ್ತವ್ಯವಾಗಬೇಕು

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ  ನಗರದ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಸಿಮೆಂಟ್ ರಸ್ತೆ, ಟೈಲ್ಸ್‌ ಫುಟ್‌ಪಾತ್ ಆಗಿ ಗಿಡಗಳನ್ನು ನೆಡಲು ಜಾಗವಿಲ್ಲದಂತಾಗಿದೆ. ಹಿಂದಿನ ಕಾಲದಲ್ಲೆಲ್ಲಾ ಮನೆಯ ಆವರಣಗಳಲ್ಲಿ ಸಸಿಯನ್ನು ನೆಟ್ಟು ಮರವಾಗಿ ಬೆಳೆಸುತ್ತಿದ್ದರು. ಮಾವು, ಹಲಸು, ತೆಂಗು,  ಸಂಪಿಗೆ ಈ ರೀತಿ ನಾನಾ ವಿಧದ ಗಿಡಮರಗಳನ್ನು ಹಾಕಿ ಪರಿಸರವನ್ನು ಬೆಳೆಸುತ್ತಿದ್ದರು. 

ಗಿಡ ಮರಗಳಿಲ್ಲದ ಮನೆಯೇ ಇಲ್ಲ ಎನ್ನುವಂತಾಗಿತ್ತು.  ಆದರೆ ಈಗ ಹಾಗಾಗುತ್ತಿಲ್ಲ. ಸಸಿಗಳನ್ನು ನೆಟ್ಟು ಬೆಳೆಸಿದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿಶೇಷ ಬಹುಮಾನ ಹಾಗೂ ಅಂಕಗಳಲ್ಲಿ ಬಡ್ತಿ ಕೊಡುವಂತಾಗಬೇಕು. ಹೀಗೆ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ, ನಾವು ಪರಿಸರವನ್ನು ರಕ್ಷಿಸಿದರೆ ನಮ್ಮನ್ನು ಪರಿಸರ ರಕ್ಷಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಂದಾದರೂ ಸಸಿಯನ್ನು ನೆಟ್ಟು ಮರವಾಗಿಸಬೇಕು ಇದು ಅವರು ದೇಶಕ್ಕೆ ನೀಡುವ ಅಮೂಲ್ಯ ಕೊಡುಗೆ ಆಗುತ್ತದೆ. ತಮ್ಮ ಕಟ್ಟಡದ ಸೌಂದರ್ಯ ಮರೆಮಾಚಿದೆ ಎನ್ನುವ ಕಾರಣಕ್ಕಾಗಿ ಮರಗಳನ್ನು ಕಡಿಯ ಬಾರದು. ನಾವು ಮುಂದಿನ ಪೀಳಿಗೆಗೆ ಏನನ್ನಾದರೂ ಕೊಡುಗೆ ಕೊಡಬೇಕೆಂ ದರೆ ಅದು ಫಲವತ್ತಾದ ಮಣ್ಣು ಹಾಗೂ ಶುದ್ಧ ನೀರು ಇವೆರಡನ್ನು ಕೊಟ್ಟರೆ ಸಾಕು, ಇದು ಬಹುದೊಡ್ಡ ಕೊಡುಗೆಯಾಗುತ್ತದೆ. ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.


ಹೆಲ್ಪ್‌ಲೈನ್ ಸುಭಾನ್, ದಾವಣಗೆರೆ.

error: Content is protected !!