ಮಾನ್ಯರೇ,
ನಗರದ ಅಶೋಕ ಚಿತ್ರಮಂದಿರದ ಬಳಿ ಅಂಡರ್ ಪಾಸ್ ಆರಂಭವಾದ ನಂತರ ರೈಲ್ವೇ ಗೇಟ್ ಮುಚ್ಚಲಾಗಿದ್ದು, ಅಲ್ಲಿ ಅಡ್ಡಾಡುವ ಪಾದಚಾರಿಗಳಿಗೆ ತೊಂದರೆ ಉಂಟಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳೂ ಸೇರಿದಂತೆ, ವಯಸ್ಸಾದವರೂ ಗೇಟಿನಲ್ಲಿ ಬಗ್ಗಿ ಬರಬೇ ಕಾಗಿದೆ. ಆದ್ದರಿಂದ ಬಹಳ ತೊಂದರೆ ಉಂಟಾಗಿದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಕೋರುತ್ತೇನೆ.
– ಜೆ.ಸೋಮನಾಥ್, ಸಮಾಜ ಸೇವಕರು, ದಾವಣಗೆರೆ.