ಮಾನ್ಯರೇ,
ಸ್ವತಂತ್ರ ಸರ್ಕಾರ ಬಂದರೆ ಸಂವಿಧಾನದ ಆಶಯದಂತೆ ಸ್ವಾತಂತ್ರ್ಯ, ಸಹೋದರತೆ, ಸಮಾನತೆ, ಸಾಮಾಜಿಕ ನ್ಯಾಯ, ನಿಯಮಗಳನ್ನು ನಿಯತ್ತಿನಿಂದ ಅನುಷ್ಠಾನ ಮಾಡುವರೇ…?
ಅತಂತ್ರ ಸರ್ಕಾರ ಬಂದರೆ, ಅಡ್ನಾಡಿ, ಅರುಕಾಮುರಕ, ಅಯೋಮಯ, ಅಲ್ಲೋಲ ಕಲ್ಲೋಲ ಖಾತ್ರಿಯೇ…?
ಆಗ ರಾಜನೀತಿ ಇಲ್ಲದ ರಾಜಕಾರಣ (politicking no statesmanship) ರೆಸಾರ್ಟ್ ರಾಜಕೀಯ, ಅಯಾ ರಾಮ್, ಗಯಾ ರಾಮ್, ಕುದುರೆ ವ್ಯಾಪಾರ, ಬಾಂಬೆ ಬಾಯ್ಸ್… ಕಟ್ಟಿಟ್ಟ ಬುತ್ತಿಯೇ…..?
ಓ ದೇವರೇ..! ನೀನಿದ್ದರೆ ಬಡ ಬಗ್ಗರಿಗೆ, ದೀನದಲಿತರಿಗೆ ನೀರು, ನಿರುದ್ಯೋಗ ನಿವಾರಣೆ, ಸಾಮರಸ್ಯ ಸೌಹಾರ್ದ, ಪರಿಸರ ರಕ್ಷಣೆ ಇತ್ಯಾದಿ ಅನುಕೂಲ ಕಲ್ಪಿಸುವ ಸಹೃದಯದ ಸಜ್ಜನರಿಗೆ ಆಡಳಿತ ದಂಡ ನೀಡು.
ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್‌ರ ಮಂತ್ರಿಗಿರಿ ನಡೆದು, ಈಗೊಮ್ಮೆ ಕಲ್ಯಾಣ ಕರ್ನಾಟಕ ಮತ್ತು ಗಾಂಧೀಜಿಯ ಕನಸಿನ ರಾಮರಾಜ್ಯದ ನಿರ್ಮಾಣದ ಪವಾಡ ನಡೆದೀತೆ…?.
– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ.