ಡಿಡಿಟಿ (ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊ)ಗಳಿಂದ ಯುವ ಜನತೆ ಮತ್ತು ದೇಶ ನಾಶವಾಗದಿರಲಿ

ಮಾನ್ಯರೇ,

ಕೇರಳದ ಕೊಚ್ಚಿನ್ ನದಿಯ ತೀರಕ್ಕೆ ಹೊಂದಿಕೊಂಡ ಸಮುದ್ರದಲ್ಲಿ ಮಾದಕ ವಸ್ತು ನಿಯಂತ್ರಣ ದಳ ನಡೆಸಿದ ದಾಳಿಯಲ್ಲಿ ಸುಮಾರು 15,000 ಕೋಟಿ ಬೆಲೆಬಾಳುವ 2500 ಕೆ.ಜಿ.ಯಷ್ಟು `ಮೆಥ್ಯಾಮ್ ಫೆಟಮೈನ್’ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ವಿಷಯ ತಂದೆ-ತಾಯಿಗಳ, ಯುವಕರ, ದೇಶದ ಕಣ್ಣು ತೆರೆಸುವಂತಿದೆ. ಕುಡಿತಕ್ಕಿಂತ ಡ್ರಗ್ಸ್ ತುಂಬಾ ಅಪಾಯಕಾರಿ. ಒಮ್ಮೆ ಇದರ ಚಟಕ್ಕೆ ಬಿದ್ದರೆ ಅದರಿಂದ ಹೊರಬರುವುದು ಸಾಧ್ಯವಿಲ್ಲ.

ಈ ಡಿಡಿಟಿ (ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊ)ಯೆಂಬ ಮಹಾಮಾರಿ ಯುವ ಜೀವಗಳ ಹರಣ ಮಾಡುವುದಲ್ಲದೇ ಸದ್ಯ ಅವರಲ್ಲಿರುವ ಕಿಂಚಿತ್ತೂ ನೈತಿಕ ಪ್ರಜ್ಞೆ, ಭಯ, ತಪ್ಪಿತಸ್ಥ ಮನೋಭಾವನೆ ಗಳೆಂಬ `ವಿವೇಕ’ಗಳನ್ನೇ ಕಿತ್ತೆಸೆಯುತ್ತಿದೆ. ಮಕ್ಕಳು, ಮುದುಕರನ್ನು ಸಾಕಬೇಕಾದ ಯುವ ಜನತೆಯ ಹಣ, ಆರೋಗ್ಯ, ಕೌಟುಂಬಿಕ ಶಾಂತಿಯನ್ನು ನಾಶ ಮಾಡುತ್ತಿವೆ. ದಯವಿಟ್ಟು ಇದರ ಬಗ್ಗೆ ಯುವ ಜನತೆ ಮತ್ತು ಇವರ ತಂದೆ-ತಾಯಿಗಳು ಎಚ್ಚೆತ್ತುಕೊಳ್ಳಬೇಕು.

ಒಂದು ದೇಶವನ್ನು ಸಂಪೂರ್ಣ ನಾಶ ಮಾಡಲು ಅಣುಬಾಂಬ್, ನ್ಯೂಕ್ಲಿಯರ್, ಮಿಸೈಲ್, ಶತ್ರುರಾಷ್ಟ್ರ ಯಾವುದೂ ಬೇಕಿಲ್ಲ.  ಆ ದೇಶದ ಯುವಜನತೆಯನ್ನು ದುಶ್ಚಟಗಳ ದಾಸ ರನ್ನಾಗಿ ಮಾಡಿದರೆ ಅಷ್ಟೇ ಸಾಕು. ಯುವಕರ ನಾಶದಿಂದ ಆ ನಾಡು ಅನಾಥ ಮಕ್ಕಳ, ವಿಧವೆಯರ, ಮುದುಕರ ಕೊಂಪೆಯಾಗುತ್ತದೆ. 

ನಮ್ಮ ಸಮಾಜ ದುಶ್ಚಟಗಳ ಹಾವಳಿಯಿಂದ ನಿರ್ನಾಮವಾಗುವುದನ್ನು ತಡೆದು, ದುಶ್ಚಟ ಮುಕ್ತವಾಗಿಸಿ ಆನಂದ, ಆರೋಗ್ಯ, ಆತ್ಮವಿಶ್ವಾಸದ ಸುಂದರ, ಭವ್ಯ ಸಮಾಜವಾಗಿ ನಿರ್ಮಾಣ ಮಾಡುವುದು ನಮ್ಮೆಲ್ಲರ, ಪ್ರಮುಖವಾಗಿ ಸರ್ಕಾರದ ಕರ್ತವ್ಯ.


– ಶಿವನಕೆರೆ ಬಸವಲಿಂಗಪ್ಪ,  ದಾವಣಗೆರೆ.

error: Content is protected !!