ಮಾನ್ಯರೇ,
ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವದೇಶೀ ಕೃಷಿ ಪದ್ಧತಿಯು ಸ್ವಾಸ್ಥ ಪೂರ್ಣವಾಗಿತ್ತು, ಮಳೆಗಾಲವು ತೃಪ್ತಿಕರವಾಗಿತ್ತು ಅರಣ್ಯವು ಜನಸಂಖ್ಯೆಗೆ ಪೂರಕವಾಗಿದ್ದವು. ದೈಹಿಕ ಪರಿಶ್ರಮದ ಜನಜೀವನವು ಆರೋಗ್ಯದ ಬೆನ್ನೆಲುಬಾಗಿತ್ತು. ಸ್ವದೇಶೀ ನೀರಾವರಿ ಕೃಷಿ ಪದ್ಧತಿಯ ಪರಿಚಯಕ್ಕಿಂತಲೂ ಪೂರ್ವದಲ್ಲಿ ಸಾವಯುವ ಕೃಷಿ ಜನಪ್ರಿಯತೆ ಕಂಡಿತ್ತು.
ಈ ವರ್ಷವನ್ನು ಅಂತರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷ ಎಂದು ಘೋಷಿಸಿರುವ ವಿಶ್ವ ಸಂಸ್ಥೆಯು, ಆಹಾರದಲ್ಲಿ ಸಿರಿ ಧಾನ್ಯಗಳ ಬಳಕೆಗೆ ಹೆಚ್ಚು ಒತ್ತು ನೀಡಿದೆ. ಮಳೆ ಅಶ್ರಿತ ಪ್ರದೇಶದಲ್ಲಿ ಬೆಳೆದ ಸಿರಿ ಧಾನ್ಯಗಳಿಂದ ಮನುಷ್ಯನಿಗೆ ಯಾವ ಕಾಯಿಲೆಯ ಬಾಧೆ ಇರುತ್ತಿರಲಿಲ್ಲ. ಸರ್ಕಾರಿ ರಸಗೊಬ್ಬರದ ಉತ್ಪಾದನೆಯ ಸ್ಥಾವರಗಳು ಆಗ ಇದ್ದಿಲ್ಲ , ಹೋಟೆಲ್‌ಗಳು ವಾಣಿಜ್ಯ ಮುಕ್ತವಾಗಿರಲಿಲ್ಲ ಮನುಷ್ಯನು ದುಶ್ಚಟಗಳಿಂದ ದೂರವಿದ್ದನು.ಕಾಯಿಲೆಗಳಿಗೆ ಹೆದರುತ್ತಿದನು. ದೇವರಲ್ಲಿ ಭಯ, ಭಕ್ತಿ, ನಂಬಿಕೆ, ಶ್ರದ್ದೆ, ಜೀವನದಲ್ಲಿ ಸಾಮರಸ್ಯ ಹೃದಯ ವೈಶಾಲ್ಯಗಳಿಂದ ಒಗ್ಗಟ್ಟು, ಸಮರ್ಪಣೆ, ತ್ಯಾಗ ಮತ್ತು ಉಪವಾಸದ ಧಾರ್ಮಿಕ ವೃತಾಚರಣೆಗಳಿಂದ ಅವನಿಗೆ ಸಂಸ್ಕೃತಿ, ಸಂಸ್ಕಾರಗಳ ನಡೆ ನುಡಿಗಳು ಲಭಿಸುತ್ತಿದ್ದವು.
ಸಾವಯವ ಕೃಷಿ ಮತ್ತು ಸಿರಿ ಧಾನ್ಯಗಳ ಅಭಿಮುಖ ಜಗತ್ತು ಮಾನವನ ದೈಹಿಕ ಪರಿಶ್ರಮ ಮತ್ತು ಸ್ವದೇಶೀ ಕೃಷಿ ಉತ್ಪಾದನೆ, ಬಳಕೆ ಮತ್ತು ಪೂರೈಕೆಗಳಿಗೆ ಸ್ವರಾಜ್ಯದ ಕನಸು ಸಾಕಾರಗೊಳ್ಳುತ್ತಿತ್ತು.
–ಜೆ.ಎಸ್.ಚಂದ್ರನಾಥ, ನೀಲಾನಹಳ್ಳಿ.