ಮಾನ್ಯರೇ,
ನಾವೀಗ ವಿಧಾನಸಭೆ ಚುನಾವಣೆ ಎದುರು ನೋಡುತ್ತಿದ್ದೇವೆ. ಹೊರಗೆ ಬೇಸಿಗೆಯ ರಣ ರಣ ಬಿಸಿಲು, ಚುನಾವಣಾ ಮತ ಪ್ರಚಾರದ ರೋಡ್ ಶೋ, ಸಾರ್ವಜನಿಕ ಬೃಹತ್ ಸಭೆಗಳು, ಒತ್ತಡದಲ್ಲಿ ಮತ ಪ್ರಚಾರಕರು. ಹೊರಗೆ ಬಿಸಿಲ ಸೆಖೆ ಎದುರಿಸಿದರೆ, ರಾಜಕೀಯದಲ್ಲಿ ಭ್ರಷ್ಟಾಚಾರ, ಲಂಚಾವತಾರದ ಬಹುಮುಖಗಳ ಪ್ರದರ್ಶನಗಳು. ಲಂಚ, ಭ್ರಷ್ಟತೆಗಳಿಗೆ ತತ್ತರಿಸಿ, ನಲುಗಿದ ಮತದಾರರು.
ರಸ್ತೆ ಬದಿಯ ಮರಗಳನ್ನು ಕಡಿದು ಬೃಹತ್ ಕಾಂಕ್ರೀಟ್ ರಸ್ತೆಗಳು, ಕೃಷಿ ಭೂಮಿಯನ್ನು ನುಂಗಿದ ರಾಷ್ಟ್ರೀಯ ಹೆದ್ದಾರಿಗಳು, ಬೃಹತ್ ಕೈಗಾರಿಕೆಗಳು, ಗಗನಚುಂಬಿ ಕಟ್ಟಡಗಳು. ಏರುತ್ತಿರುವ ಜನಸಂಖ್ಯೆಯ ಒತ್ತಡದ ಪರಿಣಾಮ ನಾವು ಪ್ರಕೃತಿ ಚಕ್ರಗಳನ್ನು ಏರು-ಪೇರು ಮಾಡಿದ್ದೇವೆ.
ಮತ್ತೆ ಭಾರತವು ನಿರಂಕುಶ ಪ್ರಜಾಪ್ರಭುತ್ವದೆಡೆಗೆ ತೆರಳಿ ಇತ್ತೀಚಿನ ರಾಜಕೀಯ ವಿದ್ಯಮಾನಗಳಲ್ಲಿ ಒಂದಾದ ಶ್ರೀಲಂಕಾ ದೇಶದಂತೆ ದುರಾಡಳಿತ ಕಂಡು, ನಮ್ಮ ದೇಶವೂ ಸ್ವತಂತ್ರವನ್ನು ಕಳೆದುಕೊಂಡು, ವಿದೇಶಿಯರ ಆಡಳಿತಕ್ಕೆ ಒಳಗಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಹೊರಗೆ ಭೌತಿಕ ರಾಜಕೀಯದ ಹೊಗೆ. ಒಳಗೆ ಬೌದ್ಧಿಕವಾದ ಮತದಾನದ ಹಗೆಯು, ಭಾರತದ ಆಡಳಿತ ತಂತ್ರದ ಪರಿಣಾಮವು ಚುನಾವಣೆಯ ಮೂಲಕ ಬಣ್ಣ ಬದಲಾಯಿಸಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ತಕ್ಕ ಉತ್ತರ ನೀಡಬಲ್ಲದು.
ಜೆ.ಎಸ್.ಚಂದ್ರನಾಥ
ನೀಲಾನಹಳ್ಳಿ.