ಮತಗಟ್ಟೆಗಳು ಹೀಗಿರಬೇಕು..!

ಮಾನ್ಯರೇ,

ಮೇ 10ರಂದು ವಿಧಾನಸಭಾ ಚುನಾವಣೆಗೆ ರಾಜ್ಯ ಸಿದ್ದವಾಗುತ್ತಿದೆ.    ಮತದಾರ  ಬಿರುಬಿಸಿಲನ್ನು ಲೆಕ್ಕಿಸದೆ ಮತದಾನಕ್ಕೆ ಪ್ರಥಮ ಪ್ರಾಶಸ್ತ್ಯ  ನೀಡಬೇಕು. ಮತಗಟ್ಟೆಯಲ್ಲಿ  ಕುಡಿಯುವ  ಶುದ್ಧ ನೀರಿನ ವ್ಯವಸ್ಥೆ,  ಬಿಸಿಲಿನಿಂದ   ರಕ್ಷಿಸಿಕೊಳ್ಳಲು  ಶಾಮಿಯಾನ, ಅಂಗವಿಕಲರಿಗೆ  ಗಾಲಿ ಕುರ್ಚಿ, ವೈದ್ಯಕೀಯ ವ್ಯವಸ್ಥೆ, ಸ್ಯಾನಿಟೈಸರ್, ಕೊರೊನಾ  ಬಾಧಿತ  ಮತಕ್ಷೇತ್ರಗಳ  ಮತಗಟ್ಟೆಗಳಲ್ಲಿ  ಮಾಸ್ಕ್‌ಗಳನ್ನು ಉಚಿತವಾಗಿ ನೀಡಬೇಕು. ಶೌಚಾಲಯಗಳನ್ನು ಸ್ವಚ್ಛವಾಗಿಟ್ಟು, ಬಳಕೆಗೆ  ನೀರಿನ ವ್ಯವಸ್ಥೆ  ಇರಲಿ, ಇದನ್ನು ರಾಷ್ಟ್ರೀಯ ಹಬ್ಬದೋಪಾದಿಯಲ್ಲಿ  ಸಂಭ್ರಮ, ಸಂತೋಷ ಹಾಗೂ ಕಡ್ಡಾಯವಾಗಿ ಆಚರಿಸಲು  ಆಸಕ್ತಿ  ತೋರಿಸಬೇಕು. 

ಯಾರೂ ಸಹ  ಚುನಾವಣಾ ನೀತಿ  ಸಂಹಿತೆ  ನಿಯಮದ   ಉಲ್ಲಂಘನೆ  ಆಗದಂತೆ  ಎಲ್ಲರೂ  ಜವಾಬ್ದಾರಿಯಿಂದ ವರ್ತಿಸಬೇಕು. ಚುನಾವಣೆ  ಸಿಬ್ಬಂದಿ ಹಾಗೂ  ಪೊಲೀಸರೊಂದಿಗೆ ಸಹಕರಿಸಬೇಕು.  ವಿದ್ಯುತ್ ಸಂಪರ್ಕದಲ್ಲಿ ತೊಂದರೆಯಾಗದಂತೆ  ಸಂಬಂಧಪಟ್ಟವರಿಗೆ  ಜಾಗೃತಿ  ಇರಲಿ. ಎಲ್ಲಾ ಮತದಾರರು ಹೆಚ್ಚು ಆಸಕ್ತಿಯಿಂದ ಮತದಾನ  ಕಾರ್ಯದಲ್ಲಿ  ಭಾಗವಹಿಸಿ, ಚುನಾವಣೆ  ಕಾರ್ಯ ಯಶಸ್ವಿಯಾಗುವಂತೆ  ಶ್ರದ್ದೆ  ಹಾಗೂ  ಪ್ರೀತಿ  ತೋರಿಸಲಿ.


– ಜೆ. ಎಸ್. ಚಂದ್ರನಾಥ , ನೀಲಾನಹಳ್ಳಿ 

error: Content is protected !!