ಮಾನ್ಯರೇ,
ದಾವಣಗೆರೆ ರೈಲು ನಿಲ್ದಾಣ ನೈಋತ್ಯ ರೈಲ್ವೆಯ, ಮೈಸೂರು ವಿಭಾಗದಲ್ಲಿ 2ನೇ ಅತಿ ಹೆಚ್ಚು ಆದಾಯ ತಂದು ಕೊಡುವ ನಿಲ್ದಾಣ.
ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚಿನ ಸೌಕರ್ಯ ಕಲ್ಪಿಸಬೇಕು – ಟ್ರೋಲಿ ಪಾತ್, ಅಂಗವಿಕಲರ ಹಾಗೆ ಸೀನಿಯರ್ ಸಿಟಿಜನ್ಸ್‌ಗೆ ನಿಲ್ದಾಣದ ಮುಖ್ಯ ದ್ವಾರದಿಂದ ರೈಲಿನ ಕೋಚ್ ಮುಟ್ಟಲು ಬ್ಯಾಟರಿ ಚಾಲಿತ ಕಾರ್ ಹಾಗು ಪ್ರಯಾಣಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಊಟ ಹಾಗು ತಿಂಡಿ ಪೂರೈಸುವ ಸಸ್ಯಹಾರಿ ಕ್ಯಾಂಟೀನ್ ಮುಂತಾದ ಸೌಲಭ್ಯಗಳನು ಕಲ್ಪಿಸಬೇಕು.
ಟಿಕೆಟ್ ಪಡೆಯಲು ಪ್ರಯಾಣಿಕರು ಜನ ದಟ್ಟಣೆಯಲ್ಲಿ ಹರಸಾಹಸ ಪಡಬೇಕಾಗುತ್ತದೆ. ರೈಲು ಬರುವ ಸಮಯದಲ್ಲಿ ಪ್ರಯಾಣಿಕರ ಅನುಕೂಲ ಕ್ಕಾಗಿ ಹೆಚ್ಚಿನ ಕೌಂಟರ್‌ಗಳಲ್ಲಿ ಟಿಕೆಟ್ ನೀಡಬೇಕು ಹಾಗು ರೈಲು ನಿಲ್ದಾಣ ದಲ್ಲಿ ಪ್ರಯಾಣಿಕರು ಕುಳಿತುಕೊಳಲು ಹೆಚ್ಚಿನ ಬೆಂಚಿನ ವ್ಯವಸ್ಥೆ ಮಾಡಬೇಕು. ರೈಲ್ವೆ ಸ್ಟೇಷನ್‌ನಲ್ಲಿ ಪ್ರಿ-ಪೇಡ್ ಆಟೋ ಕೌಂಟರ್ ಇದೆ, ಅದನ್ನು ಆದಷ್ಟು ಬೇಗ ಪ್ರಯಾಣಿಕರ ಅನುಕೂಲಕ್ಕಾಗಿ ತೆರೆಯಬೇಕು, ರಾತ್ರಿ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಪೋಲಿಸ್ ಇಲಾಖೆ ಗಸ್ತು ಹೆಚ್ಚಿಸಬೇಕು
– ರೋಹಿತ್ ಎಸ್. ಜೈನ್, ಕಾರ್ಯದರ್ಶಿ, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ, ದಾವಣಗೆರೆ