ಒಳಚರಂಡಿ ಕಾರ್ಯ : ಜೆಡಿಎಸ್ ಅಭ್ಯರ್ಥಿ ಮಂಜುನಾಥಗೌಡ ಶಿವಣ್ಣನವರ ಅಸಮಾಧಾನ

ಒಳಚರಂಡಿ ಕಾರ್ಯ :  ಜೆಡಿಎಸ್ ಅಭ್ಯರ್ಥಿ ಮಂಜುನಾಥಗೌಡ ಶಿವಣ್ಣನವರ ಅಸಮಾಧಾನ

ರಾಣೇಬೆನ್ನೂರು, ಮಾ.31- ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮತದಾರರ  ಪ್ರತಿ ಮನೆಗೂ ಭೇಟಿ ಕೊಟ್ಟು, ಪ್ರತಿ ಗ್ರಾಮದ ಸಮಸ್ಯೆಗಳನ್ನು ಅರಿತಿದ್ದೇನೆ. ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿದೆ. ಜೊತೆಗೆ ನಗರದಲ್ಲಿ ಒಳಚರಂಡಿ ಕಾರ್ಯದ ಬಗ್ಗೆ ತೀವ್ರ ಅಸಮಾಧಾನವಿದೆ ಎಂದು ಜೆಡಿಎಸ್ ಅಭ್ಯರ್ಥಿ ಮಂಜುನಾಥಗೌಡ ಶಿವಣ್ಣನವರ ತಮ್ಮ ಕಾರ್ಯಾಲಯದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ  ಹೇಳಿದರು.

ಕಳೆದ ಡಿಸೆಂ ಬರ್ ನಿಂದ ಕ್ಷೇತ್ರ ದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಕಿ.ಮೀ.  ಪಾದಯಾತ್ರೆ ಮೂಲಕ ಸಂಚರಿಸಿ  ಸಂಗ್ರಹಿಸಿದ ಅಲ್ಲಿನ ಜನರ ಸಮಸ್ಯೆಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದೇನೆ. ಅವರು ಮತ್ತೆ ಈ ತಿಂಗಳೊಳಗೆ ರಾಣೇಬೆನ್ನೂರಿಗೆ ಆಗಮಿಸಲಿದ್ದು, ನಗರದ ಕ್ರೀಡಾಂಗಣ, ಬಸ್ ನಿಲ್ದಾಣ ಹಾಗೂ ಪೌರ ಕಾರ್ಮಿಕರ ಕೊರತೆ ಕುರಿತು ತೀವ್ರವಾಗಿ ಪ್ರಯತ್ನಿಸುವಂತೆ ಮತ್ತೆ ಮನವಿ ಸಲ್ಲಿಸುತ್ತೇನೆ ಎಂದು ಮಂಜುನಾಥ ಹೇಳಿದರು.

 ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಆಶೀರ್ವದಿಸಿ ಕುಮಾರಸ್ವಾಮಿಗಳು ಮುಖ್ಯಮಂತ್ರಿಗಳಾಗಿ ಪಂಚರತ್ನ ಯಾತ್ರೆಯ ಉದ್ದೇಶವನ್ನು ಸಂಪೂರ್ಣ ಕಾರ್ಯಗತಗೊಳಿಸಿ, ರಾಜ್ಯವನ್ನು ದೇಶದಲ್ಲಿಯೇ ಮಾದರಿ ಮಾಡಲಿದ್ದಾರೆ ಎಂದು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮಹಬೂಬ ಸೈಕಲ್ಗಾರ್ ಹೇಳಿದರು.

ಮಲ್ಲಿಕಾರ್ಜುನ ಹಲಗೇರಿ, ಇಬ್ರಾಹಿಂ ಎಲಗಚ್ಚು, ಸಂಕಪ್ಪ ಲಮಾಣಿ,  ಮೌನೇಶ ಬಡಿಗೇರ, ತಿಮ್ಮಣ್ಣ ಉದಗಟ್ಟಿ ರಾಜು ಗಡ್ಡದಗೂಳಿ ಮತ್ತಿತರರಿದ್ದರು.

error: Content is protected !!