ಕ್ರಿಮಿನಾಶಕ ಸಿಂಪರಣೆಗೆ ದ್ರೋಣ್ ಬಳಕೆ ಪಿಕೆಕೆಯಿಂದ ಉಚಿತ ಯಂತ್ರಗಳ ಕೊಡುಗೆ

ಕ್ರಿಮಿನಾಶಕ ಸಿಂಪರಣೆಗೆ ದ್ರೋಣ್ ಬಳಕೆ ಪಿಕೆಕೆಯಿಂದ ಉಚಿತ ಯಂತ್ರಗಳ ಕೊಡುಗೆ

ರಾಣೇಬೆನ್ನೂರು, ಮಾ. 20- ಇಲ್ಲಿನ ಪಿಕೆಕೆ ಇನಿಷಿಯೇಟಿವ್ ಸಂಸ್ಥೆಯಿಂದ ರೈತರ ಬೆಳೆಗಳಿಗೆ ಔಷಧಿ ಸಿಂಪರಣೆಗೆ ದ್ರೋಣ್ ಯಂತ್ರಗಳನ್ನು ಕೊಡುತ್ತಿರುವುದು ಮತ್ತು ಅದನ್ನು ಬಳಸುವ ತಿಳುವಳಿಕೆ ನೀಡುತ್ತಿರುವುದು ಶ್ಲ್ಯಾಘನೀಯ ಎಂದು ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಹೇಳಿದರು.

ಸಕಾಲಕ್ಕೆ ಮಳೆ ಬಂದರೂ ಸಹ, ಕಾರ್ಮಿಕರ ಕೊರತೆಯಿಂದಾಗಿ ರೋಗ ರುಜಿನಗಳಿಂದ ಕಾಲಕಾಲಕ್ಕೆ ಬೆಳೆ ರಕ್ಷಿಸಿಕೊಳ್ಳಲಾಗದೆ ರೈತ ಬಹಳಷ್ಟು ಸಂಕಟಪಡುವ ಈ ದಿನಗಳಲ್ಲಿ, ಯಂತ್ರಗಳ ಅವಶ್ಯಕತೆ  ಇರುವುದನ್ನು ಮನಗಂಡಿರುವ ಪಿಕೆಕೆ ಸಂಸ್ಥೆ ಅವಶ್ಯ ಹಾಗೂ ಯೋಗ್ಯ ಕಾರ್ಯಕ್ರಮ ಹಾಕಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಿಕೆಕೆ ಇದುವರೆಗೂ ಯುವ ಶಕ್ತಿಗೆ ಉದ್ಯೋಗ ಮೇಳ, ಸಾಹಿತ್ಯ, ಸಂಗೀತ, ಕಲೆ, ಕ್ರೀಡೆಗಳಲ್ಲಿ ಪ್ರೋತ್ಸಾಹ ನೀಡಿದ್ದು ಪ್ರಥಮ ಬಾರಿಗೆ  ರೈತ ಪರ ಕಾರ್ಯಕ್ರಮ ಹಾಕಿಕೊಂಡಿದ್ದು, ಇದರಿಂದ ರೈತರಿಗೆ ಶೇ.90 ರಷ್ಟು ಹಣ, ಸಮಯ ಹಾಗೂ ಮಾನವ ಶಕ್ತಿ ಉಳಿತಾಯವಾಗಲಿದೆ ಎಂದು ಪಿಕೆಕೆ ಸಂಚಾಲಕ ಪ್ರಕಾಶ್ ಕೋಳಿವಾಡ ಹೇಳಿದರು. 

ಜಿಪಂ ವ್ಯಾಪ್ತಿಯಲ್ಲಿ ಉತ್ಸಾಹ ಹಾಗೂ ಪ್ರಾಮಾಣಿಕ ಕಳಕಳಿಯ ಯುವರೈತ ಶಕ್ತಿಯ ಪಡೆಯನ್ನು ರಚಿಸಿ, ಆ ಮೂಲಕ  ಯಂತ್ರಗಳ  ಬಳಕೆಗೆ ರೈತರನ್ನು ಸಜ್ಜು ಗೊಳಿಸಲಾಗುವುದು ಎಂದು ಪ್ರಕಾಶ್ ವಿವರಿಸಿದರು.

ದ್ರೋಣ ಕಂಪನಿಯ ತಜ್ಞ ಪ್ರಜ್ವಲ ಭಟ್, ಬಿ.ಎಸ್.ಮರದ, ಡಿಳ್ಳೆಪ್ಪ ಅಣ್ಣೇರ, ನೀಲಪ್ಪ ಕೂನಬೇವು, ಕೃಷ್ಣಪ್ಪ ಕಂಬಳಿ, ದುರ್ಗಪ್ಪ  ಮತ್ತಿತರರಿದ್ದರು.

error: Content is protected !!