ಹಿರೇಬಿದರಿ-ಮಾಕನೂರಲ್ಲಿ ಪಿಯು ಕಾಲೇಜು

ಹಿರೇಬಿದರಿ-ಮಾಕನೂರಲ್ಲಿ ಪಿಯು ಕಾಲೇಜು

ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ರಾಣೇಬೆನ್ನೂರು, ಮಾ.8 – ಬರುವ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 100 ವಸತಿಯುತ ಪ್ರೌಢ ಶಾಲೆಗಳಲ್ಲಿ ಪಿಯು ಕಾಲೇಜ್ ಸ್ಥಾಪಿಸಲಾಗುವುದು. ಜೊತೆಗೆ ಮಕ್ಕಳಿಗೆ ಗುಣಮಟ್ಟದ ಊಟ ಕೊಡಲು ಪ್ರತ್ಯೇಕ ಟೆಂಡರ್ ಕರೆಯಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಹಿರೇಬಿದರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ವಸತಿ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು,ರಾಜ್ಯದ 100 ಶಾಲೆಗಳಲ್ಲಿ ಹಿರೇಬಿದರಿ ಮತ್ತು ಮಾಕನೂರ ಶಾಲೆಗಳು ಸೇರಿದ್ದು ಅತೀ ಶೀಘ್ರದಲ್ಲೇ ಅಧಿಕೃತ ಸರ್ಕಾರಿ ಆದೇಶ ಹೊರಬೀಳಲಿದೆ ಎಂದರು.

ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದ ಪಾಲಕರು, ತಮ್ಮ ಮಕ್ಕಳ ಪ್ರವೇಶಾತಿ ಪಡೆಯಲು ಸರ್ಕಾರಿ ಶಾಲೆಗಳ ಎದುರು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಬರಲಿದೆ ಎಂದರು.

ಸಾರಿಗೆ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜ ಕೇಲಗಾರ, ನಗರಸಭೆ ಸದಸ್ಯ ಪ್ರಕಾಶ ಪೂಜಾರ, ಶಿವಕುಮಾರ ನರಸಗೊಂಡರ, ಗುಡ್ಡಪ್ಪ ಓಲೇಕಾರ ಮತ್ತಿತರರಿದ್ದರು.

ಈ ವೇಳೆ ಮಾಕನೂರಿನಲ್ಲಿ ಬಸ್ ನಿಲ್ದಾಣ ಶಂಕುಸ್ಥಾಪನೆ, ಸ್ಮಶಾನ ರಸ್ತೆ ಅಭಿವೃದ್ಧಿ, ಜಲ್ ಜೀವನ್ ಮಿಷನ್ ಯೋಜನೆಗೆ ಚಾಲನೆ, ಸಚಿವರ 10  ಕೋಟಿ ಅನುದಾನದಲ್ಲಿ ಕರೂರ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ ನೂರು ಮನೆ ನಿರ್ಮಾಣಕ್ಕೆ ಚಾಲನೆ, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಎಲೆಕ್ಟ್ರಿಕ್ ಬೈಕ್ ವಿತರಣೆ, ತುಂಗಾ ಮೇಲ್ದಂಡೆ ಕೊಳವೆ ಬಾವಿ ಸಲಕರಣೆ ವಿತರಣೆ ಕಾರ್ಯಕ್ರಮಗಳು ನಡೆದವು.

error: Content is protected !!