ರಾಣೇಬೆನ್ನೂರು, ಮಾ. 2- ಐರಣಿ ಮತ್ತು ಹಿರೇಬಿದರಿ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ನದಿಯಲ್ಲಿ ಗಣಿ ಗಾರಿಕೆ ಮಾಡಲು ಉಪ ಯೋಗಿಸುತ್ತಿದ್ದರು ಎನ್ನಲಾದ ತೆಪ್ಪಗಳನ್ನು ವಶಪಡಿಸಿಕೊಳ್ಳ ಲಾಗಿದೆ. ತಹಶೀಲ್ದಾರ್ ಕೆ. ಗುರುಬಸವರಾಜ, ಗಣಿ ಇಲಾಖೆ ಅಧಿಕಾರಿ ನಾಗರಾಜ, ಮೆಡ್ಲೇರಿ ಗ್ರಾಪಂ ಅಧಿಕಾರಿ ಯುವರಾಜ ಅವರು ಪೋಲೀಸರ ಜೊತೆಗೂಡಿ ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಸೋಮಣ್ಣ ತೆಗ್ಗಿನ, ಹನುಮಂತಪ್ಪ ಓಲೇಕಾರ, ಅಂಜನಿ ತಳವಾರ, ಹಾಲೇಶ ತಳವಾರ ಮತ್ತಿತರರು ಉಪಸ್ಥಿತರಿದ್ದರು.