ಅಂತರರಾಷ್ಟ್ರೀಯ ಕರಾಟೆ: ಮಾರ್ಷಲ್ ಕ್ಲಬ್‌ಗೆ 6 ಚಿನ್ನ

ಅಂತರರಾಷ್ಟ್ರೀಯ ಕರಾಟೆ: ಮಾರ್ಷಲ್ ಕ್ಲಬ್‌ಗೆ 6 ಚಿನ್ನ

ರಾಣೇಬೆನ್ನೂರು, ಫೆ.22-  ಆಂಧ್ರದ ವಿಶಾಖಪಟ್ಟಣದ ಸ್ವರ್ಣ ಭಾರತಿ ಇಂಡೋರ್ ಸ್ಟೇಡಿಯಂನಲ್ಲಿ  ಫೆ. 19 ಮತ್ತು 20  ರಂದು ನಡೆದ 6ನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಇಲ್ಲಿನ  ವಿಜಯ ಅಗಡಿ ಮಾರ್ಷಲ್ ಆರ್ಟ್ಸ್ ಸ್ಪೋಟ್ಸ್ ಕ್ಲಬ್ ವಿದ್ಯಾರ್ಥಿಗಳು   6 ಚಿನ್ನ ,9 ಬೆಳ್ಳಿ ಮತ್ತು  6 ಕಂಚಿನ ಪದಕಗಳನ್ನು ಪಡೆದು ಹಾವೇರಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. 

ಕಟಾ ವಿಭಾಗದಲ್ಲಿ  ಸಂಜೀವ್‌ಕುಮಾರ್ ಬಿ.  ಪ್ರೀತಮ್ ಪಿ. ಕೋಪರ್ಡೆ,  ನಾಗರಾಜ ಹೆಚ್. ಕೋಪರ್ಡೆ, ಅಕ್ಷಯ್ ಕೆ. ಬಗಾಡೆ,  ಚಿನ್ಮಯ್ ಎ. ಸುಣಗಾರ ಮತ್ತು   ರಕ್ಷಿತಾ ಎನ್. ಚಿಂತಾ ಅವರುಗಳು ಪ್ರಥಮ ಸ್ಥಾನ ಗಳಿಸಿ ಚಿನ್ನದ ಪಡೆದಿದ್ದಾರೆ

ಕುಮಟೆ ವಿಭಾಗದಲ್ಲಿ  ಕಾರ್ತಿಕ್ ಕೆ. ಗೌಡ,   ಸಂಜೀವ್‌ ಕುಮಾರ್ ಬಿ.,  ಸಿದ್ದಲಿಂಗೇಶ್ ಎಸ್.,   ನಿಶ್ಚಿತಾ ಐ. ಎಮ್,  ಕಿಶೋರ್ ಎಸ್.ಹೆಚ್,  ಮಾಹುಲ್‌ಮೋಹನ್ ಬಿ.ಎನ್. ಮತ್ತು   ಪ್ರತೀಕ್ ಡಿ. ಪಾಸ್ತೆ,  ಮೋನಿಕ ಆರ್ ರೇವಣಕರ್ ಮತ್ತು   ನಿಹಾಲ್ ಜಿ. ನಾಯಕ್  ಅವರುಗಳು ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾರೆ.

ಕಟಾ ವಿಭಾಗದಲ್ಲಿ  ರಕ್ಷಿತಾ ಎನ್. ಚಿಂತಾ, ಪ್ರೀತಮ್ ಪಿ. ಕೋಪರ್ಡೆ,  ನಿಹಾಲ್ ಜಿ. ನಾಯಕ್,  ಕಿಶೋರ್ ಎಸ್. ಹೆಚ್., ಹರಿಣಿ ಎನ್ ಚಿಂತಾ  ಮತ್ತು ಮೋನಿಕಾ ಆರ್ ರೇವಣಕರ್ ಅವರುಗಳು ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ.

error: Content is protected !!