ರಾಣೇಬೆನ್ನೂರು, ಫೆ. 19- ಕೊಡಿಯಾಲದ ಶಿಕ್ಷಣ ಪ್ರೇಮಿಗಳು, ಹಾವೇರಿ ಜಿಲ್ಲೆಯ ಅಕ್ಷರದವ್ವನೆಂದು ಖ್ಯಾತರಾದ ವಿವೇಕಾನಂದ ಗ್ರಾಮೀಣ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಪುಟ್ಟಮ್ಮ ಹಿರೇಮಠ ಅವರನ್ನು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಹೆಚ್. ಪಾಟೀಲ್ ಅವರು ವಯೋ ಸಹಜ ತೀವ್ರ ಅಸ್ವಸ್ಥರಾಗಿರುವ ಕಾರಣ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಸ್ತುತ ಅಧ್ಯಕ್ಷರಾದ ಶೋಭಾ ಹಿರೇಮಠ, ಉಪಾಧ್ಯಕ್ಷ ನಿಜಗುಣ ಶಿವಯೋಗಿ ಹಿರೇಮಠ, ಶಿಕ್ಷಣ ಸಂಯೋಜಕಿ ಸುನೀತಾ ಡಿ.ಬಿ., ಬಿ.ಆರ್.ಪಿ.ಗಳಾದ ನಾಗರಾಜ, ಸಿ.ಆರ್.ಪಿ ರಾಜು ಉಕ್ಕುಂದ, ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಾವಿಕಟ್ಟಿ, ಶಿಕ್ಷಕರಾದ ಶಿವಯ್ಯ ಹಿರೇಮಠ, ದೇವರಾಜ ಮಲ್ಲಾಪುರ, ರೇಖಾ ಸಿ., ರೇಣುಕಮ್ಮ ಎಸ್. ಇದ್ದರು