ರಾಣೇಬೆನ್ನೂರಿನಲ್ಲಿ ಶಾಸಕ ಅರುಣಕುಮಾರ ಪೂಜಾರ್ ಪ್ರತಿಪಾದನೆ
ರಾಣೇಬೆನ್ನೂರು, ಜ.29- ಊಟ ಮತ್ತು ವಸತಿಯ ಅನಾನುಕೂಲದಿಂದ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಸದುದ್ದೇಶದಿಂದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಸತಿ ನಿಲಯಗಳನ್ನು ಮಾಡಿ, ಶಿಕ್ಷಣಕ್ಕೆ ಬಿಜೆಪಿ ಸರ್ಕಾರ ಹೆಚ್ಚು ಒತ್ತು ನೀಡಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಚಿದಂಬರ ನಗರದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹಾಸ್ಟೆಲ್ ಉದ್ಘಾಟಿಸಿ ಅವರು ಮಾತನಾಡಿ ದರು. ಇತ್ತೀಚೆಗೆ ತಾಲ್ಲೂಕಿನ ದೇವರಗುಡ್ಡ ಗ್ರಾಮದಲ್ಲಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಪ್ರಸ್ತಾ ಪಿಸಿ ಮಾತನಾಡಿದ ಶಾಸಕರು, ಬರುವ ತೊಂದರೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಬರುವ ತೊಂದರೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳದೇ, ಅವುಗಳನ್ನು ಮೆಟ್ಟಿನಿಂತು ಸಾಧನೆಯೊಂದಿಗೆ ಅಪೇಕ್ಷಿತ ಗುರಿ ಮುಟ್ಟಿರಿ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ನನಗೂ ಅನೇಕ ಸಮಸ್ಯೆಗಳಿ ದ್ದವು ಹಾಗಾಗಿ ಓದನ್ನು ಅರ್ಧಕ್ಕೆ ಅಂತ್ಯಗೊ ಳಿಸಿಕೊಂಡೆ. ಅವುಗಳನ್ನು ಎದುರಿಸಿ ಬದುಕು ಕಟ್ಟಕೊಂಡೆ. ಹೆದರಿ ಆತ್ಮ ಹತ್ಯೆ ಮಾಡಿಕೊಂಡರೆ ಇಂದು ಅತ್ಯು ನ್ನತ ಜೀವವನ್ನು ಕಳೆದುಕೊಂಡಂತಾಗು ತ್ತದೆ. ದೇವರ ಹಾಗೂ ಈ ಕ್ಷೇತ್ರದ ಜನರ ಆಶೀರ್ವಾದದಿಂದ ಜನರ ಸೇವೆ ಮಾಡುವ ಅವಕಾಶ ದೊರಕಿದ್ದು, ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಶಾಸಕರು ಹೇಳಿದರು.
ಇದಕ್ಕೂ ಮೊದಲು ಕೂನಬೇವು ರಸ್ತೆಯಲ್ಲಿ ಬಾಬು ಜಗಜೀವನರಾಮ್ ಅವರ ಭವನ ಉದ್ಘಾಟಿಸಿದ ಶಾಸಕ ಅರುಣಕುಮಾರ್ ಪೂಜಾರ್, ಜೊತೆಗೆ ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಸದಸ್ಯರಾದ ಪ್ರಕಾ ಸದ ಪೂಜಾರ್, ಗಂಗಮ್ಮ ಹಾವನೂರ, ಮಲ್ಲಣ್ಣ ಅಂಗಡಿ, ತಾ.ಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಬಿಜೆಪಿ ಮುಖಂಡರಾದ ಶಿವಕುಮಾರ ನರಸಗೊಂಡರ, ಪವನ ಮಲ್ಲಾಡದ, ಮಂಜುನಾಥ ಓಲೇಕಾರ ಮತ್ತಿತರರಿದ್ದರು.