ಎಲ್ಲವನ್ನು ಬಲ್ಲವರೇ ಶಿವಾಚಾರ್ಯರಾಗುತ್ತಾರೆ

ಎಲ್ಲವನ್ನು ಬಲ್ಲವರೇ ಶಿವಾಚಾರ್ಯರಾಗುತ್ತಾರೆ

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ಭಗವತ್ಪಾದರು

ರಾಣೇಬೆನ್ನೂರು, ಜ. 23- ಎಲ್ಲವನ್ನು ಬಲ್ಲವರೇ ಶಿವಾಚಾರ್ಯರಾಗುತ್ತಾರೆ. ಧಾರ್ಮಿಕ, ಅಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಅನ್ನ ಮುಂತಾದ ದಾಸೋಹದ ಮೂಲಕ ಸಮಾ ಜದ ಉದ್ಧಾರಕ್ಕಾಗಿ ವೀರಶೈವ ಮಠಗಳು ಸದಾ ನಿರತವಾಗಿವೆ ಎಂದು ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾ ಚಾರ್ಯ ಭಗವತ್ಪಾದರು ನುಡಿದರು.

ಜಗದ್ಗುರುಗಳು ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವದ ನಂತರ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಠ, ಮಂದಿರಗಳು ಗೃಹಸ್ಥರಿಂದಲೇ ಉದ್ಧಾರವಾಗಬೇಕು. ಕೆಲ ಮಠಗಳಿಗೆ ಆಸ್ತಿ ಇರಬಹುದು. ಆದರೆ ಬಹಳಷ್ಟು ಮಠಗಳಿಗೆ ಭಕ್ತರೇ ಆಸ್ತಿ. ವೀರಶೈವ ಧರ್ಮವು ಮನುಷ್ಯ ಮಾತ್ರವಲ್ಲದೇ ಪ್ರಾಣಿ, ಪಕ್ಷಿ ಸೇರಿದಂತೆ ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸುತ್ತಿವೆ. ಸಮಾಜದ ಉದ್ಧಾರ ಮಠಗಳ ಮೂಲ ಮಂತ್ರವಾಗಿದೆ ಎಂದು ಜಗದ್ಗುರುಗಳು ನುಡಿದರು.

ದಾರಿ ತಪ್ಪಿ ನಡೆಯುವ ಮನುಷ್ಯರನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಮಠಗಳು, ಧಾರ್ಮಿಕ ಗುರುಗಳು ಅಡ್ಡಪಲ್ಲಕ್ಕಿ ಮುಂತಾದ ಧಾರ್ಮಿಕ ಸಮಾರಂಭಗಳ ಮೂಲಕ ಮಾಡುತ್ತಿವೆ ಎಂದು ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಹೇಳಿದರು.

ತೊಗರ್ಸಿ ಮಹಾಂತ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು, ಕವಲೇ ದುರ್ಗದ ಮರುಳಸಿದ್ಧರಾಜ ದೇಶಿಕೇಂದ್ರ ಶ್ರೀಗಳ ರಟ್ಟಿಹಳ್ಳಿಯ ಶಿವಲಿಂಗ ಶಿವಾ ಚಾರ್ಯ ಶ್ರೀಗಳು, ದಿಂಡದಹಳ್ಳಿ ಪಶು ಪತಿ ಶಿವಾಚಾರ್ಯ ಶ್ರೀಗಳು, ಮಣ ಕೂರು ಮಲ್ಲಿಕಾರ್ಜುನ ಶಿವಾಚಾರ್ಯ, ಶ್ರೀಗಳ ನರಸಾಪುರದ ಶಿವಕುಮಾರ ಶಿವಶರಣರು ಪಾಲ್ಗೊಂಡಿದ್ದರು.

ಸ್ಪಟಿಕ ಹಾಗೂ ಪಚ್ಛೆ ಲಿಂಗಗಳಿಗೆ ಪ್ರಾಣ ಪ್ರತಿಷ್ಠಾಪನೆ, ಮಹಾನ್ಯಾಸ, ಪದ್ವನ್ಯಾಸ, ತತ್ವದ್ವನ್ ಯಾನ, ಅಂಗನ್ಯಾಸ ಮತ್ತು ವಿಶೇಷ ಸಂಸ್ಕಾರ, ರುದ್ರಾಭಿಷೇಕ, ವೈದಿಕ ವಿಧಿ, ವಿಧಾನಗಳು , ಅಡ್ಡಪಲ್ಲಕ್ಕಿ , ಬೆಲ್ಲದಿಂದ ತುಲಾಭಾರ, ಕೋಟಿಲಿಂಗ ಸ್ಥಾಪನೆಗೆ ಸ್ಥಾಪನೆಗೆ ಚಾಲನೆ, ಕಳಸಾರೋಹಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು  ನಡೆದವು. ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣವರ ಭಾರತಿ ಅಲವಂಡಿ ಮುಂತಾದವರಿದ್ದರು.

error: Content is protected !!