ರಾಣೇಬೆನ್ನೂರು, ಆ.19 – ನಗರದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸ್ಥಳೀಯ ರೋಟರಿ ಕ್ಲಬ್ ವತಿ ಯಿಂದ ನಗರದ ಕೋವಿಡ್ ಆಸ್ಪತ್ರೆಯ ರೋಗಿ ಗಳು ಸಮಯ ಕಳೆಯುವ ಸಲುವಾಗಿ ಒಳಾಂ ಗಣ ಆಟದ ಸಾಮಗ್ರಿಗಳನ್ನು ನೀಡಲಾಯಿತು.
ಈ ಸಮಯದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಕಲ್ಯಾಣಿ ಮಾತನಾಡಿ, ಕೋವಿಡ್ ಸೋಂಕಿತರ ಬಗ್ಗೆ ಅಸ್ಪೃಶ್ಯ ಭಾವನೆ ಹೊಂದದೆ ಅವರನ್ನು ಗೌರವದಿಂದ ಕಾಣಬೇಕು. ಚಿಕಿತ್ಸಾ ಸಮಯದಲ್ಲಿ ಕೋವಿಡ್ ರೋಗಿಗಳಿಗೆ ಮನರಂಜನೆ ಒದಗಿಸಿ ಆತ್ಮಸ್ಥೈರ್ಯ ತುಂಬು ವಂತೆ ಮಾಡುವುದು ತಮ್ಮ ಸಂಸ್ಥೆಯ ಉದ್ದೇಶ ವಾಗಿದೆ. ಆದ್ದರಿಂದ ಒಳಾಂಗಣ ಆಟದ ಸಾಮ ಗ್ರಿಗಳನ್ನು ಕೋವಿಡ್ ಸೋಕಿಂತರ ಅನುಕೂಲಕ್ಕೆ ನೀಡಲಾಗಿದೆ ಎಂದರು. ಆಟದ ಪರಿಕರಗಳನ್ನು ಟಿಎಚ್ಒ ಡಾ.ಸಂತೋಷಕುಮಾರ ಅವರಿಗೆ ಹಸ್ತಾಂತರಿಸಲಾಯಿತು. ಡಾ.ಬಿ.ಎಸ್.ಕೇಲಗಾರ, ವೀರೇಶ ಹನಗೋಡಿಮಠ, ಜಿ.ಜಿ.ಹೊಟ್ಟಿಗೌಡ್ರ, ವೀರೇಶ ಮೋಟಗಿ, ಸುಧೀರ ಕುರವತ್ತಿ ಸೇರಿದಂತೆ ಮತ್ತಿತರು ಇದ್ದರು.