ಅಕ್ರಮ ಗಣಿಗಾರಿಕೆ: ನ್ಯಾಯಕ್ಕಾಗಿ ರೈತನ ಮೊರೆ

ರಾಣೇಬೆನ್ನೂರು, ಆ.16- ತಾಲ್ಲೂಕಿನ ಶಿಡಗನಾಳ ಗ್ರಾಮದ ಕೆ. ಮಲ್ಲೇಶ ತಂದೆ ಕೆ. ಉಮಾಪತಿ ಅವರ ಸರ್ವೇ ನಂ. 76 ರಲ್ಲಿ ಗಣಿಗಾರಿಕೆ ಮಾಡುತ್ತಿರುವ ಸಿ.ಆರ್. ಬಳ್ಳಾರಿ ಅವರು ಪಕ್ಕದ ನನ್ನ ಮಾಲ್ಕಿ ಜಮೀನು ಸರ್ವೇ ನಂ. 77/7 ಗುಂಟೆಯಷ್ಟು ಜಮೀನು ಅತಿಕ್ರಮ ಮಾಡಿಕೊಂಡಿದ್ದು, ನ್ಯಾಯ ದೊರಕಿಸಿಕೊಡುವಂತೆ ರೈತ ಶಂಕರಣ್ಣ ಮಲ್ಲಪ್ಪ ನ್ಯಾಮತಿ ಮನವಿ ಮಾಡಿದ್ದಾರೆ.

ತಮ್ಮ ಜಮೀನಿನಲ್ಲಿ 150 ಅಡಿ ಆಳದಷ್ಟು ಮಣ್ಣು ತೆಗೆದಿದ್ದಾರೆ. ಇಲ್ಲಿ ಯಾವ ರೀತಿಯಲ್ಲೂ ಕೃಷಿ ಮಾಡಲು ಆಗುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ತಮಗಾದ ನಷ್ಟವನ್ನು ತುಂಬಿಸಿಕೊಡುವಂತೆ ಸಿ.ಆರ್. ಬಳ್ಳಾರಿ ಅವರನ್ನು ಕೇಳಿದರೆ ನಾವು ಶಾಸಕರ ಕಡೆಯವರು ಎಂದು ಧಮಕಿ ಹಾಕುತ್ತಿದ್ದಾರೆ ಎಂದು ರೈತ ಶಂಕರಣ್ಣ ತನ್ನ ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಸ್ಥಳ ಪರಿಶೀಲನೆ ನಡೆಸಿ, ತನಗಾದ ನಷ್ಟವನ್ನು ತುಂಬಿಸಿಕೊಡುವಂತೆ ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದಾಗಿ ರೈತ ಶಂಕರಣ್ಣ ಪತ್ರಕರ್ತರಿಗೆ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!