ರಾಣೇಬೆನ್ನೂರು ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನ : ಶಾಸಕ ಅರುಣಕುಮಾರ

ರಾಣೇಬೆನ್ನೂರು, ನ. 21 – ರಾಜ್ಯದ ಯಾವ ನಗರ ಹಾಗೂ ಪಟ್ಟಣಕ್ಕೆ ನೀಡದ ವಿಶೇಷ ಅನುದಾನವನ್ನು ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಆಂಜನೇಯ ಬಡಾವಣೆಗೆ ಹೋಗುವ ರಸ್ತೆಯ ಕಾಮಗಾರಿ ಪ್ರಾರಂಭಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.  ನಗರದ ಅಭಿವೃದ್ಧಿಗೆ 20 ಕೋಟಿ ವಿಶೇಷ ಅನುದಾನ ಕೇಳಲಾಗಿತ್ತು. ಮುಖ್ಯಮಂತ್ರಿಗಳು ಈಗ 10 ಕೋಟಿ ಕೊಡುವುದಾಗಿ ಹೇಳಿ ಈಗ 5 ಕೋಟಿ ಬಿಡುಗಡೆ ಮಾಡಿದ್ದಾರೆ. ನಗರದಲ್ಲಿ ಅವಶ್ಯವಿರುವ ಕಾಮಗಾರಿಗಳಿಗೆ ವಿಳಂಬ ಮಾಡದೇ ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆ ದಾರರಿಗೆ ಸೂಚಿಸಿರುವದಾಗಿ ಶಾಸಕರು ಹೇಳಿದರು. 

ಆಂಜನೇಯ ಬಡಾವಣೆ ಯಲ್ಲಿ ನಾಲ್ಕು ನೂರು ಮನೆಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಒದಗಿದ್ದು ಅವುಗಳನ್ನ ಶೀಘ್ರವಾಗಿ ಫಲಾ ನುಭವಿಗಳಿಗೆ ಕೊಡಲಾಗುತ್ತದೆ. ಕೊಳಚೆ ಪ್ರದೇಶಗಳ ಫಲಾನುಭವಿಗಳಿಗೂ ಮನೆ ಕಟ್ಟಿಕೊಡುವ ಕಾರ್ಯ ಸಹ ನಡೆಯಲಿದೆ ಎಂದು ಶಾಸಕರು ಹೇಳಿದರು. 

ಕೊಟ್ಟೂರೇಶ್ವರ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ, ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಸದಸ್ಯರಾದ ರಾಜು ಅಡ್ಮನಿ, ಮಲ್ಲಪ್ಪ ಅಂಗಡಿ ಮತ್ತಿತರರು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.

error: Content is protected !!